ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ನಡೆಯುವ ಮಧ್ಯ ಕರ್ನಾಟಕದ ಜನೋತ್ಸವವೆಂದೇ ಪ್ರಸಿದ್ಧವಾಗಿರುವ ಶರಣ ಸಂಸ್ಕೃತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಶ್ರೀಮಠದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಹಾಗೂ ಡಾ. ಹನುಮಲಿ ಷಣ್ಮುಖಪ್ಪ, ಜಿ.ಎಸ್. ಅನಿತ್‌ಕುಮಾರ್, ಪಟೇಲ್ ಶಿವಕುಮಾರ್ ಬಿಡುಗಡೆಗೊಳಿಸಿದರು.
ಈ ಬಾರಿಯ ಉತ್ಸವದ ಕಾರ್‍ಯಕ್ರಮಗಳ ಕುರಿತು ಮಾಹಿತಿ ನೀಡಿದ ಶ್ರೀಗಳು, ಸೆಪ್ಟೆಂಬರ್-25 ರಿಂದ ಅಕ್ಟೋಬರ್-3ರವರೆಗೆ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶರಣಸಂಸ್ಕೃತಿ ಉತ್ಸವ ಪೂರ್ವಭಾವಿಯಾಗಿ ಎಸ್.ಜೆ.ಎಂ. ವಿದ್ಯಾಪೀಠದ ಅಧೀನದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಮುರಾ ಕ್ರೀಡಾಕೂಟವು ಸೆ-20 ರಿಂದ 22 ರವರೆಗೆ ನಡೆಯಲಿದೆ.
ಸೆ.25 ರಿಂದ ಅ.3ರವರೆಗೆ ಖ್ಯಾತಯೋಗ ಗುರು ಚೆನ್ನಬಸವಣ್ಣನವರು ಅವರಿಂದ ಬೆಳಗ್ಗೆ ೫-೧೧೫ ಗಂಟೆಗೆ ಯೋಗಾಸನ ಕಾರ್ಯಕ್ರಮ ಏರ್ಪಡಿಸಲಾಗಿದೆ ಹಾಗೂ ಪ್ರತಿದಿನ ಬೆಳಗ್ಗೆ ೭.೩೦ ಗಂಟೆಗೆ ವಿವಿಧ ಮಠಾಧೀಶರು ಸಹಜ ಶಿವಯೋಗ ನಡೆಸಿಕೊಡಲಿರುವರು.
ಸೆ.20ರಂದು ಬೆಳಗ್ಗೆ ೧೦.೩೦ ಗಂಟೆಗೆ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜಮುರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಕ್ರೀಡಾಕೂಟ ಉದ್ಘಾಟಿಸುವರು. ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷೆ ಎಂ.ಪಿ. ಅನಿತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜಪೀರ್, ಎಂ.ಕೆ. ಹಟ್ಟಿ ಗ್ರಾ.ಪಂ. ಅಧ್ಯಕ್ಷ ಆರ್. ಗಣೇಶ್ ಅವರುಗಳು ಭಾಗವಹಿಸುವರು.
ಸೆ.23ರಂದು ಮಂಗಳವಾರ ವಚನ ಕಂಠಪಾಠ ಸ್ಪರ್ಧೆ, ೧೨ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ ಮತ್ತು 24 ರಂದು ಬುಧವಾರ ರಂಗೋಲಿ ಸ್ಪರ್ಧೆ, ಸಾವಯವ ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸೆ.25ರ ಬೆಳಗ್ಗೆ ೭.೩೦ ಗಂಟೆಗೆ ಸಹಜ ಶಿವಯೋಗ ಮತ್ತು ಬಸವತತ್ತ್ವ ಧ್ವಜಾರೋಹಣ ಕಾರ್ಯಕ್ರಮವಿದ್ದು, ಜೆ.ಎಂ. ಜಯಕುಮಾರ್ ಧ್ವಜಾರೋಹಣ ನೆರವೇರಿಸುವರು. ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಮಾಜಿ ರಾಜ್ಯಸಭಾ ಸದಸ್ಯ ಹೆಚ್.ಹನುಮಂತಪ್ಪ, ಪಟೇಲ್ ಶಿವಕುಮಾರ್, ಎಸ್.ವಿ. ನಾಗರಾಜಪ್ಪ, ಕೆ. ವೆಂಕಣ್ಣಾಚಾರ್ ಅವರುಗಳು ಅತಿಥಿಗಳಾಗಿ ಭಾಗವಹಿಸುವರು. ಬೆಳಗ್ಗೆ ೧೦ ಗಂಟೆಗೆ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಕುರಿತು ವಿಚಾರ ಸಂಕಿರಣದ ಗೋಷ್ಠಿ-೧ರಲ್ಲಿ ನಿಡಸೂಸಿಯ ಶ್ರೀ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು, ಇಳಕಲ್ ಶ್ರೀ ಗುರುಮಹಾಂತ ಸ್ವಾಮಿಗಳು ಸಮ್ಮುಖ ವಹಿಸಲಿದ್ದು, ಅಥಣಿಯ ಶ್ರೀ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಅಥಣಿಯ ಶ್ರೀ ಪ್ರಭುಚೆನ್ನಬಸವ ಸ್ವಾಮಿಗಳು, ಹಾರೂಗೇರಿಯ ಡಾ. ವಿ.ಎಸ್. ಮಾಳಿ, ಅಥಣಿಯ ಡಾ. ಎಂ.ಎಸ್. ಉಕ್ಕಲಿ ಅವರುಗಳು ಪಾಲ್ಗೊಳ್ಳಲಿದ್ದಾರೆ. ಅದೇದಿನ ಮಧ್ಯಾಹ್ನ ೨.೩೦ಕ್ಕೆ ನಡೆಯುವ ಗೋಷ್ಠಿ-೨ರಲ್ಲಿ ಧಾರವಾಡದ ಶ್ರೀ ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು, ಚಿಕ್ಕಮಗಳೂರಿನ ಡಾ. ಬಸವಮರುಳಸಿದ್ಧ ಸ್ವಾಮಿಗಳು ಸಮ್ಮುಖ ವಹಿಸುವರು. ಬೆಳಗಾವಿಯ ಡಾ. ಬಸವರಾಜ ಜಗಜಿಂಪಿ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿಗಳಾದ ಪ್ರಕಾಶ್ ಗಿರಿಮಲ್ಲನವರ, ಡಾ. ಗುರುದೇವಿ ಹುಲೆಪ್ಪನವರ ಮಠ ಭಾಗವಹಿಸುವರು. ಸಂಜೆ ೫.೦೦ ಗಂಟೆಗೆ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ ಜರುಗಲಿದ್ದು, ತುಮಕೂರು ಎಸ್.ಎಸ್.ಡಿ.ಸಿ. ಕಾಲೇಜಿನ ಡೀನ್ ಡಾ. ಪ್ರವೀಣ್ ಬಿ. ಕುಡ್ವ, ಭೂಪಾಲ್‌ನ ಡಾ. ಜಿ.ಎಸ್. ಚಂದು ಪಾಲ್ಗೊಳ್ಳುವರು.
ಸೆ.26ರಂದು ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಶ್ರೀ ಮುರಿಗೆ ಶಾಂತವೀರ ಮಹಾಸ್ವಾಮಿಗಳವರ ಕೃತಿಗಳನ್ನು ಕುರಿತು ವಿಚಾರಸಂಕಿರಣ ಹಾಗೂ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹೆಬ್ಬಾಳಿನ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು, ಹೆಗ್ಗುಂದ ವನಕಲ್ ಮಠದ ಡಾ. ಬಸವರಮಾನಂದ ಸ್ವಾಮಿಗಳು ಸಮ್ಮುಖ ವಹಿಸುವರು. ಹಂಪಿ ವಿವಿಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಉದ್ಘಾಟಿಸುವರು. ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಡಾ. ಅಮರೇಶ ಯತಗಲ್, ಡಾ. ಲಕ್ಷ್ಮಣ ತೆಲಗಾವಿ, ಡಾ. ಬಿ. ನಂಜುಂಡಸ್ವಾಮಿ, ಡಾ. ಬಿ. ನಂಜುಂಡಸ್ವಾಮಿ, ಡಾ. ಬಿ. ರಾಜಶೇಖರಪ್ಪ ಅವರುಗಳು ಭಾಗವಹಿಸುವರು. ಮಧ್ಯಾಹ್ನ ೨.೩೦ ಗಂಟೆಗೆ ಗೋಷ್ಠಿ-೨ ನಡೆಯಲಿದ್ದು, ಶ್ರೀ ಜಗದ್ಗುರು ಕೃಷ್ಣ ಯಾದವಾನಂದ ಸ್ವಾಮಿಗಳು ಸಮ್ಮುಖ ವಹಿಸುವರು. ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯಅತಿಥಿಗಳಾಗಿ ಬೆಂಗಳೂರಿನ ಡಾ. ಸಿ.ಕೆ. ಜಗದೀಶ್, ಡಾ. ಎಫ್.ಟಿ. ಹಳ್ಳಿಕೇರಿ, ಡಾ. ವೀರೇಶ್ ಬಡಿಗೇರ, ಡಾ. ಪಿ.ಯಶೋದ ರಾಜಶೇಖರಪ್ಪ ಅವರುಗಳು ಭಾಗವಹಿಸುವರು.
ಸೆ.27ರಂದು ಶನಿವಾರ ಬೆಳಗ್ಗೆ ೧೦ ಗಂಟೆಗೆ ಗೋಷ್ಠಿ – ೩ ನಡೆಯಲಿದ್ದು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶ್ರೀ ಜಗದ್ಗುರು ವೇಮನಾನಂದ ಸ್ವಾಮಿಗಳು ಸಮ್ಮುಖ ವಹಿಸುವರು. ಡಾ. ಬೈರಮಂಗಲ ರಾಮೇಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಡಾ. ಸಿ.ಯು. ಮಂಜುನಾಥ್, ಡಾ. ಸಿ. ನಾಗಭೂಷಣ, ಡಾ. ಸಿ. ಶಿವಕುಮಾರಸ್ವಾಮಿ, ಡಾ. ವೈ.ಸಿ. ಭಾನುಮತಿ ಅವರುಗಳು ಪಾಲ್ಗೊಳ್ಳಲಿದ್ದಾರೆ.
ಅದೇದಿನ ಮಧ್ಯಾಹ್ನ ೨.೩೦ಕ್ಕೆ ನಡೆಯುವ ವಿಚಾರ ಸಂಕಿರಣ ಸಮಾರೋಪದಲ್ಲಿ ಕನ್ನಡ ವಿವಿ ಡಾ. ಎ. ಮುರಿಗೆಪ್ಪ, ಹೆಸರಾಂತ ಕಾದಂಬರಿಕಾರ ಡಾ. ಬಿ.ಎಲ್. ವೇಣು, ಕೆ.ಆರ್. ರಾಜಶೇಖರ್, ಜಿ.ಎಸ್. ಉಜ್ಜಿನಪ್ಪ, ಎಸ್.ಷಣ್ಮುಖಪ್ಪ ಅವರುಗಳು ಭಾಗವಹಿಸುವರು. ಸಂಜೆ ೫ ಗಂಟೆಗೆ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ ನಡೆಯಲಿದ್ದು, ಯುಬಿಡಿಟಿ ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು.
ಸೆ.28ರಂದು ಭಾನುವಾರ ಬೆಳಗ್ಗೆ ೧೦.೩೦ಕ್ಕೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ, ಜಮುರಾ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಚನ ಝೇಂಕಾರ ಸಮಾರಂಭ ನಡೆಯಲಿದ್ದು, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಂವಾದ ನಡೆಸಿಕೊಡಲಿದ್ದಾರೆ. ಸಿದ್ದಯ್ಯನಕೋಟೆಯ ಶ್ರೀ ಬಸವಲಿಂಗ ಸ್ವಾಮಿಗಳು, ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮಿಗಳು ಸಮ್ಮುಖ ವಹಿಸಲಿದ್ದು, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್‍ಯದರ್ಶಿ ಎಸ್.ಎಂ. ಜಾಮದಾರ್, ಉದ್ಯಮಿ ಅನಿತ್‌ಕುಮಾರ್ ಜಿ.ಎಸ್., ಹೆಚ್.ಎನ್.ತಿಪ್ಪೇಸ್ವಾಮಿ, ಕೆ.ಎಂ. ವೀರೇಶ್, ಕೆ.ಸಿ.ನಾಗರಾಜ್, ಜಿ.ಡಿ. ಕೆಂಚವೀರಪ್ಪ ಅವರುಗಳು ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಸಂಜೆ ೪.೦೦ ಗಂಟೆಗೆ ನಡೆಯುವ ಬಸವಸಂಸ್ಕೃತಿ ಅಭಿಯಾನ ಪಾದಯಾತ್ರೆಯನ್ನು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಉದ್ಘಾಟಿಸುವರು. ಸಂಜೆ ೬ ಗಂಟೆಗೆ ನಡೆಯುವ ಬಸವಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಗದಗ್‌ನ ತೋಂಟದಾರ್ಯಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿ ಹಿರೇಮಠದ ಡಾ. ಮ.ಘ.ಚ. ಬಸವಲಿಂಗ ಪಟ್ಟವರು ಸಮ್ಮುಖ ವಹಿಸುವರು. ಮುಖ್ಯಅತಿಥಿಗಳಾಗಿ ವಿಜಯಪುರ ಡಾ. ಜಿ.ಎಸ್. ಪಾಟೀಲ್, ಈಶ್ವರಖಂಡ್ರೆ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಕೃಷ್ಣಪ್ಪ, ಟಿ.ಆರ್.ಚಂದ್ರಶೇಖರ್, ಎಚ್.ಎಂ. ಸೋಮಶೇಖರಪ್ಪ, ರವೀಂದ್ರ ಹೊನವಾಡ, ಎಂ.ಎ. ಅರುಣ, ಕೃಪಾಶಂಕರ್, ಶಾಂತಕುಮಾರ್ ಹರ್ಲಾಪುರ ಅವರುಗಳು ಭಾಗವಹಿಸುವರು.
ಸೆ.29ರಂದು ಸೋಮವಾರ ಬೆಳಗ್ಗೆ ೧೦ ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ, ಚಿಕಿತ್ಸೆ, ನೇತ್ರದಾನ ನೊಂದಣಿ ಕಾರ್ಯವಿರುತ್ತದೆ. ಬೆಳಗ್ಗೆ ೧೧ ಗಂಟೆಗೆ ನಡೆಯುವ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವಚನಾನಂದ ಮಹಾಸ್ವಾಮಿಗಳು, ಗೌರಿಗದ್ದೆಯ ವಿನಯ್ ಗುರೂಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಸಚಿವರಾದ ಸಂತೋಷ್ ಲಾಡ್, ಮಧು ಎಸ್. ಬಂಗಾರಪ್ಪ, ಡಿಐಜಿಪಿ ರವಿ ಡಿ.ಚೆನ್ನಣ್ಣನವರ, ಮಹೇಶ್ ಮಾಸಾಳ್ ಮುಂತಾದವರು ಭಾಗವಹಿಸುವರು. ಸಂಜೆ ೬ ಗಂಟೆಗೆ ಆರೋಗ್ಯ ಮೇಳ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶಾಸಕರಾದ ಎಂ. ಚಂದ್ರಪ್ಪ, ಬಿ.ಜಿ. ಗೋವಿಂದಪ್ಪ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ರವೀಂದ್ರನಾಥ್ ಕೆ.ಎಸ್., ಡಾ.ಸ್ವಾಮಿನಾಥ್ ಜಿ., ಡಾ.ಪ್ರಶಾಂತ್ ಜಿ. ಪಾಲ್ಗೊಳ್ಳುವರು.
ಸೆ.30ರಂದು ಮಂಗಳವಾರ ಬೆಳಗ್ಗೆ ೭.೩೦ಕ್ಕೆ ಸಹಜ ಶಿವಯೋಗ ನಡೆಯಲಿದೆ. ಬೆಳಗ್ಗೆ ೧೦೩.೦ಕ್ಕೆ ನಡೆಯುವ ಕೃಷಿ ಮತ್ತು ಕೈಗಾರಿಕಾ ಮೇಳದಲ್ಲಿ ತುಮಕೂರು ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಗೋಕಾಕ್‌ನ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ಹೊಸದುರ್ಗದ ಶ್ರೀ ಶಾಂತವೀರ ಮಹಾಸ್ವಾಮಿಗಳು ಸಮ್ಮುಖ ವಹಿಸುವರು. ಮುಖ್ಯಅತಿಥಿಗಳಾಗಿ ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯಸಚಿವರಾದ ಎಂ.ಬಿ. ಪಾಟೀಲ್, ಎನ್. ಚೆಲುವರಾಯಸ್ವಾಮಿ, ಡಿ. ಸುಧಾಕರ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್, ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ರಾಜ್ಯ ಕೃಷಿಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ ದಳವಾಯಿ, ಜಿ.ಪಂ. ಸಿಇಓ ಡಾ. ಎಸ್. ಆಕಾಶ್, ಬಿ.ಎನ್. ಲಿಂಗಾರೆಡ್ಡಿ ಮೊದಲಾದವರು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ೧೦ ಗಂಟೆಗೆ ಜೋಡೆತ್ತು, ದೇಶಿತಳಿ ಮತ್ತು ಸಾಕುಪ್ರಾಣಿಗಳ ಪ್ರದರ್ಶನ ಮತ್ತು ಸ್ಪರ್ಧೆ ಇರಲಿದೆ.
ಅದೇದಿನ ಮಧ್ಯಾಹ್ನ ೨.೩೦ಕ್ಕೆ ನಡೆಯುವ ಕೃಷಿಮೇಳ ಗೋಷ್ಟಿ-೨ರಲ್ಲಿ ಡಾ. ಟಿ.ವಿ. ಗಿರೀಶ್, ಡಾ. ದೇವರಾಜರೆಡ್ಡಿ, ವಿವಿಧ ಜಿಲ್ಲೆಗಳ ರೈತಸಂಘದ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸುವರು. ಸಂಜೆ ೬ ಗಂಟೆಗೆ ಮಹಿಳಾ ಸಮಾವೇಶ. ಈ ಸಮಾರಂಭದಲ್ಲಿ ತಿಂಥಿಣಿಯ ಶ್ರೀ ಸಿದ್ಧರಮಾನಂದಪುರಿ ಸ್ವಾಮಿಗಳು, ಹೊಸದುರ್ಗದ ಶ್ರೀ ಜಗದ್ಗುರು ಪುರಷೋತ್ತಮಾನಂದಪುರಿ ಸ್ವಾಮಿಗಳು, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಮನೋವೈದ್ಯೆ ಡಾ. ಸೌಜನ್ಯ ವಶಿಷ್ಠ ಮುಂತಾದವರು ಪಾಲ್ಗೊಳ್ಳುವರು.
ಅಕ್ಟೋಬರ್-1ರಂದು ಸೋಮವಾರ ಬೆಳಗ್ಗೆ ೭.೩೦ಕ್ಕೆ ಸಹಜ ಶಿವಯೋಗ, ಬೆಳಗ್ಗೆ ೧೦ ಗಂಟೆಗೆ ವಚನಕಮ್ಮಟ ಪರೀಕ್ಷೆಯ ರ್‍ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿರುತ್ತದೆ. ಸಂಜೆ ೬ ಗಂಟೆಗೆ ಜಾನಪದ ಸಮಾವೇಶ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಅಧೀನದ ಶಾಲಾಕಾಲೇಜುಗಳ ನಿವೃತ್ತ ನೌಕರರ ಸಮಾಗಮ ಕಾರ್‍ಯಕ್ರಮದ ಸಮ್ಮುಖವನ್ನು ಶ್ರೀ ಮೋಕ್ಷಪತಿ ಮಹಾಸ್ವಾಮಿಗಳು ವಹಿಸುವರು. ಬಿ.ಆರ್. ಪೊಲೀಸ್ ಪಾಟೀಲ್ ವಿಷಯಾವಲೋಕನ ಮಾಡಲಿದ್ದು, ವಿಧಾನಪರಿಷತ್ ಸದಸ್ಯ ಶ್ರೀನಿವಾಸ್ ಡಿ.ಟಿ., ಮಿಮಿಕ್ರಿ ಗೋಪಿ, ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಪಾಲ್ಗೊಳ್ಳುವರು.
ಅ.2 ರಂದು ಗುರುವಾರ ಬೆಳಗ್ಗೆ ೭.೩೦ ಗಂಟೆಗೆ ಸಹಜ ಶಿವಯೋಗ ನಡೆಯಲಿದ್ದು, ಬೆಳಗ್ಗೆ ೧೧ ಗಂಟೆಗೆ ಶರಣಸಂಸ್ಕೃತಿ ಉತ್ಸವ – ಜಾನಪದ ಕಲಾಮೇಳವು ಆರ್.ಹೆಚ್. ಜಿನ್ನಿಂಗ್ ಫ್ಯಾಕ್ಟರಿಯಿಂದ ಹೊರಟು ಬಿ.ಡಿ. ರಸ್ತೆ, ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಮೇಲುದುರ್ಗಕ್ಕೆ ಆಗಮಿಸುವುದು. ಮೆರವಣಿಗೆಯಲ್ಲಿ ಧಾರ್ಮಿಕ, ಐತಿಹಾಸಿಕ, ಸಾಮಾಜಿಕ ಪುಣ್ಯಪುರುಷರ ಸ್ತಬ್ಧ ದೃಶ್ಯಗಳು ಹಾಗೂ ವಿವಿಧ ಜನಪದ ಕಲಾತಂಡಗಳು ಭಾಗವಹಿಸುವುವು. ಅಪರಾಹ್ನ ೪ಗಂಟೆಗೆ ಮೇಲುದುರ್ಗದ ಶ್ರೀ ಮುರುಘಾಮಠದ ಆವರಣದಲ್ಲಿ ಶ್ರೀಗಳಿಗೆ ಭಕ್ತಿ ಸಮರ್ಪಣೆ ನಡೆಯಲಿದೆ. ಸಂಜೆ ೬.೩೦ ಗಂಟೆಗೆ ಮಕ್ಕಳ ಸಂಭ್ರಮ ಕಾರ್ಯಕ್ರಮವಿರುತ್ತದೆ.
ಉತ್ಸವದ ಕೊನೆಯ ದಿನ ಅಕ್ಟೋಬರ್-3ರಂದು ಶುಕ್ರವಾರ ಬೆಳಗ್ಗೆ ೮ ಗಂಟೆಗೆ ಸಹಜ ಶಿವಯೋಗ, ಬೆಳಗ್ಗೆ ೯.೩೦ ಗಂಟೆಗೆ ಶ್ರೀ ಮುರಿಗೆ ಶಾಂತವೀರ ಸ್ವಾಮಿಗಳವರ ಮೂರ್ತಿಯ ಶೂನ್ಯ ಪೀಠಾರೋಹಣ, ಬೆಳಗ್ಗೆ ೧೧ ಗಂಟೆಗೆ ಧರ್ಮಗುರು ಬಸವಣ್ಣನವರ ಮತ್ತು ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ, ಬೆಳಗ್ಗೆ ೧೧.೩೦ಕ್ಕೆ ಶ್ರೀ ಜಯದೇವ ಜಂಗೀಕುಸ್ತಿ ಹಾಗೂ ಸಂಜೆ ೬ ಗಂಟೆಗೆ ಶರಣಸಂಸ್ಕೃತಿ ಉತ್ಸವ ಸಮಾರೋಪ ಮತ್ತು ಸಂಗೀತ ಸಂಭ್ರಮ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಶ್ರೀ ಶಿವಾನಂದ ಸ್ವಾಮಿಗಳು, ಮಾತೆ ಸತ್ಯಕ್ಕ, ಮಾತೆ ಜಯದೇವಿತಾಯಿ, ಮಾತೆ ಚಿನ್ಮಯಿ ತಾಯಿ, ಮಾತೆ ಚಂದ್ರಕಲಾ ತಾಯಿ, ಡಾ. ಹನುಮಲಿ ಷಣ್ಮುಖಪ್ಪ, ಜಿ.ಎಸ್. ಅನಿತ್‌ಕುಮಾರ್, ಪಟೇಲ್ ಶಿವಕುಮಾರ್,

ಕೆಇಬಿ ಷಣ್ಮುಖಪ್ಪ, ಎಸ್.ವಿ. ನಾಗರಾಜಪ್ಪ, ಫಾತ್ಯರಾಜನ್, ಪಿ. ವೀರೇಂದ್ರಕುಮಾರ್, ಕೋಗುಂಡೆ ದ್ಯಾಮಣ್ಣ, ಡಿ.ಎಸ್. ಮಲ್ಲಿಕಾರ್ಜುನ್, ಕೆಂಚವೀರಪ್ಪ, ವಿವಿಧ ಸಮಾಜದ ಮುಖಂಡರುಗಳು ಮೊದಲಾದವರು ಇದ್ದರು. ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ. ವೀರೇಶ್ ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆಂಚವೀರಪ್ಪ ಶರಣಸಮರ್ಪಣೆ ಮಾಡಿದರು.

