ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳಾದ 83-ಶಿಗ್ಗಾಂವಿ, 95-ಸಂಡೂರು ಮತ್ತು 185-ಚನ್ನಪಟ್ಟಣ ಕ್ಷೇತ್ರಗಳ 2024 ರ ಉಪ ಚುನಾವಣೆಯ ಮತದಾನ ನವೆಂಬರ್ 13 ರಂದು ನಡೆದಿದ್ದು, ಮತ ಎಣಿಕೆಯು ನವೆಂಬರ್ 23 ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಮತ ಎಣಿಕೆಗೆ ಅವಶ್ಯಕವಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಇವಿಎಂ ಯಂತ್ರಗಳಲ್ಲಿ ಚಲಾವಣೆಯಾದ ಮತಗಳ ಎಣಿಕೆಗೆ ಮುನ್ನ ಅಂಚೆ ಮತ ಎಣಿಕೆ ಕಾರ್ಯ ನಡೆಯಲಿದೆ. ಅಂಚೆ ಮತ ಎಣಿಕೆಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗುವುದು.
ಮತ ಎಣಿಕೆ ಕೇಂದ್ರಗಳು: ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆಯು ಹಾವೇರಿ ಜಿಲ್ಲೆಯ ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕೊಠಡಿ/ ಸಭಾಂಗಣ 1 ರಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದೆ.
ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕೊಠಡಿ/ ಸಭಾಂಗಣ 1ರಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದೆ. ಮತ್ತು ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆಯ ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕೊಠಡಿ / ಸಭಾಂಗಣ –3+1 ರಲ್ಲಿ 7+7+1 – 15 ಟೇಬಲ್‍ಗಳಲ್ಲಿ ನಡೆಯಲಿದೆ.
ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ 1 – ಆರ್‍ಒ, 2- ಎಆರ್‍ಒ, 19 – ಸೂಕ್ಷ್ಮ ವೀಕ್ಷಕರು, 17- ಎಣಿಕೆ ಮೇಲ್ವಿಚಾರಕರು, 18- ಎಣಿಕೆ ಸಹಾಯಕರು, ಸಂಡೂರು ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ 1 – ಆರ್‍ಒ, 1 – ಎಆರ್‍ಒ, 20 – ಸೂಕ್ಷ್ಮ ವೀಕ್ಷಕರು, 19- ಎಣಿಕೆ ಮೇಲ್ವಿಚಾರಕರು, 21 – ಎಣಿಕೆ ಸಹಾಯಕರು
ಮತ್ತು ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ 1 – ಆರ್‍ಒ, 1- ಎಆರ್‍ಒ, 1- ಹೆಚ್ಚುವರಿ ಎಆರ್‍ಒ, 30 – ಸೂಕ್ಷ್ಮ ವೀಕ್ಷಕರು, 30 – ಎಣಿಕೆ ಮೇಲ್ವಿಚಾರಕರು, 30- ಎಣಿಕೆ ಸಹಾಯಕರನ್ನೊಳಗೊಂಡ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.