ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬದಲಾವಣೆ………ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು…….ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು……

ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು…..

- Advertisement - 

ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು……..

ಭ್ರಷ್ಟಾಚಾರದ ಕೂಪವಾಗುತ್ತಿರುವ ಸರ್ಕಾರಿ ಕಚೇರಿಗಳು……. ಅಪಘಾತಗಳ ತವರೂರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು…..

- Advertisement - 

ಮೌಢ್ಯಗಳ ಮಹಲುಗಳಾಗುತ್ತಿರುವ ಎಲ್ಲಾ ಧರ್ಮಗಳ ದೇವಮಂದಿರಗಳು……

ಗುಲಾಮಿ ಮನೋಭಾವ ಸೃಷ್ಟಿಸುತ್ತಿರುವ ಐಟಿಬಿಟಿ ಕಂಪನಿಗಳು…….

ವಿವೇಚನಾ ಶಕ್ತಿಯನ್ನೇ ನಾಶ ಮಾಡುತ್ತಿರುವ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು………

ಉದ್ಯೋಗಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ವಿದೇಶಿ ಕಂಪನಿಗಳು……

ಮೋಸ, ವಂಚನೆ, ಕುತಂತ್ರಗಳ ಕಣಗಳಾಗುತ್ತಿರುವ ರಾಜಕೀಯ ಪಕ್ಷಗಳು…..

ದುಷ್ಟ ಜನಪ್ರತಿನಿಧಿಗಳು ಆಯ್ಕೆಯಾಗಲು ವೇದಿಕೆಯಾಗುತ್ತಿರುವ ಚುನಾವಣೆಗಳು……

ಅಪರಾಧಿಗಳ ಸೃಷ್ಟಿಗೆ ಕಾರಣವಾಗುತ್ತಿರುವ ಪೊಲೀಸ್ ಸ್ಟೇಷನ್ ಮತ್ತು ಜೈಲುಗಳು……

ಮೂಢನಂಬಿಕೆಗಳಿಗೆ ದಾಸರನ್ನಾಗಿ ಮಾಡುತ್ತಿರುವ ಮಠಮಾನ್ಯಗಳು…….

ಸೀಡ್ಲೆಸ್ ಯುವ ಜನಾಂಗದ ಸೃಷ್ಟಿಗೆ ಕಾರಣವಾಗುತ್ತಿರುವ ಮೊಬೈಲ್, ಲ್ಯಾಪ್ಟಾಪ್ ಮುಂತಾದ ಗ್ಯಾಜೆಟ್ ಗಳು…….

ದೇಹ ಮತ್ತು ಮನಸ್ಸುಗಳ ಮೇಲೆ ನಿಯಂತ್ರಣ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ಮಾಡುತ್ತಿರುವ ವೇಗ ಮತ್ತು ಸ್ಪರ್ಧೆಯ ಆಧುನಿಕ ತಂತ್ರಜ್ಞಾನ…..

ಕೆಲವು ಜನರ ಬದುಕಿನ ನಾಶಕ್ಕೆ ಕಾರಣವಾಗುತ್ತಿರುವ ಆನ್ಲೈನ್ ಗೇಮ್ ಗಳು…..

ಸಾವಿನ ವ್ಯಾಪಾರಿಗಳಾಗುತ್ತಿರುವ ಮಾದಕದ್ರವ್ಯ ಮಾರಾಟಗಾರರು…..

ಸುಳ್ಳುಗಳ ಸೃಷ್ಟಿಕರ್ತರಾಗುತ್ತಿರುವ ಸ್ವಯಂ ಘೋಷಿತ ದೇವಮಾನವರು…..

ಹೀಗೆ ಸಮಾಜ ತನ್ನ ಮೂಲ ಆಶಯದಿಂದ ನಿಧಾನವಾಗಿ ಈ ರೀತಿಯ ಬದಲಾವಣೆಯತ್ತ ಸಾಗುತ್ತಿದೆ‌. ಈ ಬದಲಾವಣೆಗಳು ಮೂಲ ಆಶಯದ ವಿರುದ್ಧ ದಿಕ್ಕಿನಲ್ಲಿ ವಿನಾಶದತ್ತ ಚಲಿಸುತ್ತಿವೆ‌. ಮನುಷ್ಯ ತನ್ನ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಈ ವ್ಯವಸ್ಥೆಗಳು ಈಗ ಅವನ ನಾಶಕ್ಕೆ ಬಳಕೆಯಾಗುತ್ತಿರುವುದು ಮಾನವ ಸಮಾಜದ ದುರಂತ‌.

ಈ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಮೂಲಕ ಈ ದುರಂತಗಳನ್ನು ತಡೆಗಟ್ಟಬಹುದು. ಇಲ್ಲದಿದ್ದರೆ ಪ್ರಕೃತಿಯೇ ಮುಂದೊಂದು ದಿನ ಪಾಠ ಕಲಿಸುವವರೆಗೂ ಮನುಷ್ಯನ ದುರಂತಗಳ ಸರಮಾಲೆ ನಡೆಯುತ್ತಲೇ ಇರುತ್ತದೆ………

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..
ಲೇಖನ:ವಿವೇಕಾನಂದ. ಎಚ್. ಕೆ.
9663750451

Share This Article
error: Content is protected !!
";