ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಸರ್ಕಾರದಲ್ಲಿ ಕಾರ್ಯರೂಪದಲ್ಲಿವೆ! ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಕೇವಲ 11 ತಿಂಗಳಿನಲ್ಲಿ ಶೇ.46 ಹೂಡಿಕೆ ಸಾಕಾರ ನಮ್ಮ ಸರ್ಕಾರ ಕರ್ನಾಟಕದಲ್ಲಿ ನಿರ್ಮಾಣ ಮಾಡಿರುವ ಹೂಡಿಕೆ ಸ್ನೇಹಿ ಪರಿಸರವನ್ನು ಜಾಗತಿಕ ಹೂಡಿಕೆದಾರರಿಗೆ ಮನದಟ್ಟು ಮಾಡಿದ ಪರಿಣಾಮ ಕಳೆದ ವರ್ಷದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ಬೃಹತ್ ಹೂಡಿಕೆ ಹರಿದುಬಂತು.
ಹೂಡಿಕೆ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಅರ್ಜಿ ಸಲ್ಲಿಕೆ, ಭೂಮಿ ಮತ್ತಿತರ ಮಂಜೂರಾತಿಗಳು, ಕಡ್ಡಾಯ ಅನುಮೋದನೆಗಳು ಇವೆಲ್ಲವನ್ನೂ ಸಂಪೂರ್ಣ ಏಕಗವಾಕ್ಷಿ ವ್ಯವಸ್ಥೆ ಮೂಲಕ ಒದಗಿಸಲಾಯಿತು ಎಂದು ಸಚಿವರು ತಿಳಿಸಿದರು.
ಇದೆಲ್ಲದರ ಪರಿಣಾಮ ಕೇವಲ 11 ತಿಂಗಳಲ್ಲಿ 4.71 ಲಕ್ಷ ಕೋಟಿ ನೈಜ ಹೂಡಿಕೆ ಸಾಕಾರಗೊಂಡಿದೆ. ತಯಾರಿಕೆ, ಮರುಬಳಕೆ ಇಂಧನ ಮತ್ತು ಮೂಲಸೌಕರ್ಯ ವಲಯದಲ್ಲಿ ದಾಖಲೆ ಹೂಡಿಕೆಗಳಾಗಿವೆ. ಇದು ನಮ್ಮ ಸರ್ಕಾರದ ರಚನಾತ್ಮಕ ಕೈಗಾರಿಕಾ ನೀತಿ ಮತ್ತು ಸರಳ ಅನುಮೋದನೆಗಳಿಗೆ ದೊರೆತಿರುವ ಸ್ಪಷ್ಟ ಯಶಸ್ಸಾಗಿದ್ದು ಒಡಂಬಡಿಕೆಗಳು ಹಿಂದಿನಂತೆ ಕೇವಲ ಕಾಗದದಲ್ಲಿ ಮಾತ್ರ ಇರದೆ, ಕಾರ್ಯರೂಪದಲ್ಲಿ ಸಾಗುತ್ತಿವೆ ಎಂದು ಪಾಟೀಲ್ ತಿಳಿಸಿದರು.

