ಚಿರತೆ ದಾಳಿಗೆ ಹಸು ಬಲಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಸಲು ಹೋಬಳಿ ತಮ್ಮಗಾನಹಳ್ಳಿ ಗ್ರಾಮದ ಸಮೀಪ  ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ರಕ್ತ ಹೀರಿ ಕೊಂದಿರುವ ಘಟನೆ ನಡೆದಿದೆ.

ತಮ್ಮ ಗಾನಹಳ್ಳಿ ಗ್ರಾಮದ ನಿವಾಸಿ ಹನುಮಂತ ರಾಯಪ್ಪ ಅವರ ಮಡದಿ ಎಂದಿನಂತೆ  ಅರಣ್ಯದ ಸಮೀಪದ ಜಮೀನಿನಲ್ಲಿ ಹಸುಗಳನ್ನು ಮೇಯಿಸಲು ತೆರಳಿದ್ದ ವೇಳೆ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ.

- Advertisement - 

ಈ ವೇಳೆ ಸಮೀಪದಲ್ಲೇ ಇದ್ದ ಹನುಮಂತರಾಯಪ್ಪ ಹಾಗೂ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕಿರು ಚಾಡಿದ ಪರಿಣಾಮ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಆದರೆ ಅಷ್ಟರೊಳಗೆ ಹಸುವು ಚಿರತೆ ದಾಳಿಯಿಂದ  ಸತ್ತು ಹೋಗಿದೆ.

ಈ ಘಟನೆಯಿಂದ ಹನುಮಂತರಾಯಪ್ಪ ಅವರಿಗೆ ಸುಮಾರು 20 ರಿಂದ 25 ಸಾವಿರ ಆರ್ಥಿಕ ನಷ್ಟ ಉಂಟಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

- Advertisement - 

ದಾಳಿಗಳು  ಅರಣ್ಯ ಪ್ರದೇಶಗಳ ಸಮೀಪದ ಹಳ್ಳಿಗಳಲ್ಲಿ, ಕಾಡಿನಂಚಿನ ವಸತಿ ಪ್ರದೇಶಗಳಲ್ಲಿ ಸಂಭವಿಸುತ್ತವೆ.  ಇಂತಹ ದಾಳಿಗಳನ್ನು ತಡೆಯಲು ಮತ್ತು ಚಿರತೆಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪದೇ ಪದೆ ಚಿರತೆಗಳ ದಾಳಿಯಿಂದ ಗ್ರಾಮೀಣ ಭಾಗದ ಜನರಲ್ಲಿ  ಆತಂಕ ಮೂಡಿದೆ ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

 

Share This Article
error: Content is protected !!
";