ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಹತ್ಯೆ ನಿಯಂತ್ರಣ ಕಾಯ್ದೆ ಜಾರಿಗೊಳಿಸಲಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಾರೋಷವಾಗಿ ಗೋಹತ್ಯೆ ಪ್ರಕರಣಗಳು ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಬಾಗಲಕೋಟೆ ಜಿಲ್ಲೆಯ ಪುರಾತನ ಶ್ರೀ ಬಾಲಾಜಿ ದೇಗುಲದೆದುರು ಕಡಿದೆಸೆದ ಗೋವಿನ ರುಂಡ, ದೇಹ ಇಟ್ಟು ಹಿಂದು ಸಮುದಾಯವನ್ನು ಕೆಣಕುವ ಪ್ರಯತ್ನವನ್ನು ಮತಾಂಧರು ಮಾಡಿದ್ದಾರೆ.
ಪೊಲೀಸ್ ಇಲಾಖೆಯು ರಾಜ್ಯ ಸರ್ಕಾರದ ಒತ್ತಡದಿಂದ ಗೋ ಹತ್ಯೆ – ಕಳ್ಳಸಾಗಾಟವನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಅಕ್ರಮ ಗೋ ಕಳ್ಳಸಾಗಾಟವನ್ನು ತಡೆಯುವ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ರೌಡಿಶೀಟರ್ ಹಣೆಪಟ್ಟಿಯನ್ನು ಕಟ್ಟಲಾಗುತ್ತಿದೆ.
ತಮ್ಮ ಬೆಂಬಲಕ್ಕೆ ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ ಗೋ ಕಳ್ಳರು ರಾಜಾರೋಷದಿಂದ ಮೆರೆಯುತ್ತಿದ್ದಾರೆ. ದೇಶದಲ್ಲಿ ಗೋಹತ್ಯೆ ನಿಷೇಧ ಆಗಬೇಕು ಎಂದು ಗಾಂಧೀಜಿ ಸಹ ಪ್ರತಿಪಾದಿಸಿದ್ದರು. ಗಾಂಧಿ ತತ್ವವನ್ನು ಪಾಲಿಸುತ್ತಿದ್ದೇವೆ ಎನ್ನುವ ಸಿದ್ದರಾಮಯ್ಯ ರಾಜ್ಯದಲ್ಲಿ ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಗೋಹಂತಕರಿಗೆ ಪರಿಹಾರ ನೀಡಿದ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಗೋ ಕಳ್ಳತನ ಮಾಡುವವರಿಗೆ, ಅಕ್ರಮ ಕಸಾಯಿಖಾನೆಗೆ ಪ್ರೋತ್ಸಾಹಧನ – ಸಬ್ಸಿಡಿ ಹಣ ನೀಡಿದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಹಿಂದೂಗಳು ಪೂಜ್ಯನೀಯ ದೃಷ್ಟಿಯಿಂದ ಕಾಣುವ ಗೋಮಾತೆಯ ಹತ್ಯೆಯನ್ನು ಈ ಸಮಾಜ ಎಂದಿಗೂ ಒಪ್ಪಲಾರದು. ಮುಸ್ಲಿಂ ಸಮುದಾಯದ ತುಷ್ಟೀಕರಣ ಮಾಡಲು ಕಾಂಗ್ರೆಸ್ ಗೋ ಹಂತಕರ ಬೆಂಬಲಕ್ಕೆ ನಿಂತಿದೆ. ಪುಣ್ಯಕೋಟಿಯ ಶಾಪ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸುಡದೇ ಬಿಡದು ಎಂದು ಬಿಜೆಪಿ ಎಚ್ಚರಿಸಿದೆ.