ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿಯ ಮಧುರನಹೊಸಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಸಂಕ್ರಾಂತಿ ಪ್ರಯುಕ್ತ ಮಧುರನಹೊಸಹಳ್ಳಿ ಪ್ರೀಮಿಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾವಳಿ ನಡೆಸಲಾಯಿತು.
ಹೊನಲು ಬೆಳಕಿನ ಪಂದ್ಯಾವಳಿಯನ್ನು 2 ದಿನಗಳ ಕಾಲ ನಡೆದ ಪಂದ್ಯದಲ್ಲಿ 3 ತಂಡಗಳ ನಡುವೆ ನಡೆದ ಪಂದ್ಯಗಳಲ್ಲಿ ಎಂ.ತ್ಯಾಗರಾಜು ನೇತೃತ್ವದ ಮಧುಸೂದನ್ ನಾಯಕತ್ವದ ಎಂಸಿಸಿ ಕ್ರಿಕೆಟರ್ಸ್ ಮಧುರನಹೊಸಹಳ್ಳಿ ಪ್ರಥಮ ಬಹುಮಾನ ಗಳಿಸಿತು.
ಟಿ.ಪ್ರಕಾಶ್ ನೇತೃತ್ವದ ಹರಿ ನಾಯಕತ್ವದ ಮಧುರನಹೊಸಹಳ್ಳಿ ಚಾಲೆಂಜರ್ಸ್ ದ್ವಿತೀಯ ಬಹುಮಾನ ಗಳಿಸಿದರೆ. ಚೇತನ್ ಕುಮಾರ್ ನೇತೃತ್ವದ ಅನಿಲ್ ಕುಮಾರ್ ನಾಯಕತ್ವ ಮಾರುತಿ ಚಾಲೆಂಜರ್ಸ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಮಧುರನಹೊಸಹಳ್ಳಿ ಮತ್ತು ಅಕ್ಕಪಕ್ಕ ಗ್ರಾಮಗಳ ಯುವಕರು, ಗ್ರಾಮಸ್ಥರು ಭಾಗಿಯಾದ್ದರು.

