ಬೆಳೆಗಳ ವಿಮಾ ದತ್ತಾಂಶ ಮಾಹಿತಿ ಸರಿಪಡಿಸಿಕಳಿಸಲು ಅವಕಾಶ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ೨೦೨೩-೨೪ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮುಗಳಲ್ಲಿ ಬೆಳೆಗಳ ದತ್ತಾಂಶವನ್ನು ದಾಖಲು ಮಾಡಿಕಳಿಸಿಕೊಟ್ಟಿದ್ದು ಮುಂಗಾರಿಯಲ್ಲಿ ೧೨೯೩, ಹಿಂಗಾರಿನಲ್ಲಿ ೩೫ ಪ್ರಸ್ತಾವನೆಗಳು ತಿರಸ್ಕೃತಗೊಂಡಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಫೆ.೧೫ರಿಂದ ಮಾರ್ಚ್೨ರ ತನಕ ಅವಕಾಶವಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ತಿಳಿಸಿದ್ದಾರೆ.

ಅವರು, ಈ ಬಗ್ಗೆ ಮಾಹಿತಿ ನೀಡಿ, ಯಾವುದಾದರೂ ಆಕ್ಷೇಪಣೆವಿದ್ದಲ್ಲಿ ಕೂಡಲೇ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯುವಂತೆ ವಿನಂತಿಸಿದ್ದಾರೆ.

- Advertisement - 

 

 

- Advertisement - 

Share This Article
error: Content is protected !!
";