ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಯಾವುದೂ ಕೂಡಾ ಸರ್ಕಾರದ ನಿಯಂತ್ರಣದಲ್ಲಿಲ್ಲ. ಬೆಲೆ ಏರಿಕೆಯ ಸಾಮ್ರಾಜ್ಯವನ್ನು ಕಾಳಸಂತೆಕೋರರು ನಿಭಾಯಿಸುತ್ತಿದ್ದರೆ, ಹಣಕಾಸು ಚಟುವಟಿಕೆಯನ್ನು ಬಡ್ಡಿ ದಂಧೆಕೋರರು ನಿರ್ವಹಿಸುತ್ತಿದ್ದಾರೆ. ಸರ್ಕಾರ ಮತ್ತು ಸಂಪೂರ್ಣ ಸಚಿವ ಸಂಪುಟ ಇದರ ಫಲಾನುಭವಿಗಳಾಗಿದ್ದಾರೆ, ಕೋಟಿ ಕೋಟಿ ಕಪ್ಪುಹಣ ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕರ ಕಿಸೆಗೆ ಇಳಿಯುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಇದರಿಂದಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಜಾರಿಗೊಳಿಸಿದ ಮೈಕ್ರೋಫೈನಾನ್ಸ್‌ಸುಗ್ರೀವಾಜ್ಞೆ ಕೂಡಾ ಕಾಟಾಚಾರಕ್ಕಾಗಿ ಅಸ್ತಿತ್ವದಲ್ಲಿದೆ. ಕಾಯ್ದೆ ಜಾರಿಯಾದ ಬಳಿಕವೂ 11 ಜನರು ಆತ್ಮಹತ್ಯೆಗೈದಿದ್ದು ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸಂಪೂರ್ಣ ಸಚಿವ ಸಂಪುಟವೇ ಕುರ್ಚಿ ಗುದ್ದಾಟದಲ್ಲಿ ತೊಡಗಿದ್ದು, ಸರ್ಕಾರದೊಳಗೆ ಹನಿಟ್ರ್ಯಾಪ್, ಫೋನ್‌ಟ್ರ್ಯಾಪ್, ಕೊಲೆ ಯತ್ನದ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯ ಕಾಂಗ್ರೆಸ್‌ಸರ್ಕಾರ ಸಂಪೂರ್ಣವಾಗಿ ಅಸ್ಥಿರವಾಗಿದ್ದು, ಆಡಳಿತ ಯಂತ್ರ ಕುಸಿದು ಬಿದ್ದಿದೆ ಎಂದು ಬಿಜೆಪಿ ದೂರಿದೆ.