ಸಿ.ಟಿ ರವಿ ಮಹಿಳಾ ಸಚಿವರನ್ನು 12 ಬಾರಿ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 “ಕೇಂದ್ರ ಗೃಹಸಚಿವರು ಸದನದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಸಿ.ಟಿ ರವಿಯವರು ರಾಹುಲ್ ಗಾಂಧಿ ಅವರನ್ನು ನಿಂದಿಸಿದ್ದರು.

ನಮ್ಮ ಪಕ್ಷದ ನಾಯಕರ ಸಮರ್ಥನೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂದಾದಾಗ, ಸಿ.ಟಿ ರವಿ ನಮ್ಮ ಮಹಿಳಾ ಸಚಿವರನ್ನು 12 ಬಾರಿ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ. ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಬಿಜೆಪಿ ಸಂಸ್ಕೃತಿಯೇ? ಭಾರತದ ಸಂಸ್ಕೃತಿಯೇ?”. ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸಿ.ಟಿ ರವಿ ಕೊಳಕು ಪದ ಬಳಕೆ ಮಾಡಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆ ಸಿದ್ದರಾಮಯ್ಯ ಅವರ ಬಗ್ಗೆಯೂ ಅಷ್ಟೇ ಕೀಳಾಗಿ ಮಾತನಾಡಿದ್ದರು. ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಇಡೀ ಚಿಕ್ಕಮಗಳೂರಿನಲ್ಲಿ ಇಷ್ಟು ಕೆಟ್ಟ ಪದ ಬಳಸಿ ಮಾತನಾಡುವವರು ಇವರೊಬ್ಬರೆ.
ಡಿಕೆ ಶಿವಕುಮಾರ್, ಡಿಸಿಎಂ, ಕರ್ನಾಟಕ ಸರ್ಕಾರ.

 

- Advertisement -  - Advertisement - 
Share This Article
error: Content is protected !!
";