ದೇವಸ್ಥಾನಗಳ ಧ್ವಂಸಕ್ಕೆ ಸಂಚು ರೂಪಿಸಿದ್ದ ಉಗ್ರ ಶಾರೀಖ್: ಕಠಿಣ ಕ್ರಮಕ್ಕೆ ಸಿ.ಟಿ. ರವಿ ಆಗ್ರಹ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಗಳೂರು ಆಟೋ ರಿಕ್ಷಾ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಖ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡ ಬೆನ್ನಲ್ಲೇ
, ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಉಗ್ರವಾದದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

​ದೇವಸ್ಥಾನಗಳೇ ಗುರಿ: ಸಂಚು ಬಯಲು
​ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಸಿ.ಟಿ. ರವಿ
, “ಐಸಿಸ್ ಸಂಘಟನೆಯಿಂದ ಪ್ರೇರಣೆ ಪಡೆದಿದ್ದ ಈ ಸ್ಥಳೀಯ ಉಗ್ರ, ಭಾರತದ ಪ್ರಮುಖ ದೇವಾಲಯಗಳನ್ನು ನಾಶಪಡಿಸುವ ಹೀನ ಉದ್ದೇಶ ಹೊಂದಿದ್ದ. ಅದೃಷ್ಟವಶಾತ್, ಬಾಂಬ್ ಟೈಮರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಅದು ಮೊದಲೇ ಸ್ಫೋಟಿಸಿತು. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ತಪ್ಪಿದಂತಾಗಿದೆ,” ಎಂದು ತಿಳಿಸಿದ್ದಾರೆ.

- Advertisement - 

​ಪಶ್ಚಾತ್ತಾಪ ಕೇವಲ ನಾಟಕ?
​ನ್ಯಾಯಾಲಯದಲ್ಲಿ ಶಾರೀಖ್ ವ್ಯಕ್ತಪಡಿಸಿರುವ ಪಶ್ಚಾತ್ತಾಪದ ಕುರಿತು ಅನುಮಾನ ವ್ಯಕ್ತಪಡಿಸಿರುವ ಅವರು.

​ಶಿಕ್ಷೆಯಿಂದ ಪಾರಾಗುವ ತಂತ್ರ: ಶಾರೀಖ್ ನೀಡುತ್ತಿರುವ ಪಶ್ಚಾತ್ತಾಪದ ಹೇಳಿಕೆ ಕೇವಲ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಕೂಡಿದೆಯೇ ಹೊರತು, ಆತನಲ್ಲಿ ನಿಜವಾದ ಮನಪರಿವರ್ತನೆಯಾಗಿಲ್ಲ.

- Advertisement - 

​ಸಿಂಡಿಕೇಟ್‌ಗಳ ಜಾಲ: ಸಮಾಜದಲ್ಲಿ ಶಾರೀಖ್‌ನಂತಹ ಯುವಕರನ್ನು ಹಾದಿ ತಪ್ಪಿಸುವ ಬೋಧಕರು, ಸಿಂಡಿಕೇಟ್‌ಗಳು ಮತ್ತು ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ.

​ಸರ್ಕಾರಕ್ಕೆ ಆಗ್ರಹ-
​ಭಯೋತ್ಪಾದನೆಯ ವಿರುದ್ಧ ಸರ್ಕಾರ ಅತ್ಯಂತ ಕಠಿಣ ನಿಲುವನ್ನು ತಳೆಯಬೇಕು ಎಂದು ಆಗ್ರಹಿಸಿರುವ ಅವರು
, “ದೇವಸ್ಥಾನಗಳನ್ನು ಧ್ವಂಸ ಮಾಡಲು ಮತ್ತು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಲು ಆಲೋಚಿಸುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಲೇಬೇಕು. ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವ ಮೂಲಗಳನ್ನು ಬೇರುಸಹಿತ ಕಿತ್ತೆಸೆಯಬೇಕು,” ಎಂದು ಒತ್ತಾಯಿಸಿದ್ದಾರೆ.

 

Share This Article
error: Content is protected !!
";