‘ಉಡ್ತಾ ಕರ್ನಾಟಕ’ದತ್ತ ರಾಜ್ಯ: ಡ್ರಗ್ಸ್ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ ಅವರು
, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ.

​ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ದಂಧೆ?
​ಟ್ವಿಟರ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು
, “ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಡ್ರಗ್ಸ್ ದಂಧೆ ವಿಪರೀತವಾಗಿ ಬೆಳೆದು ಹಬ್ಬಿರುವುದು ನಿಜಕ್ಕೂ ಆತಂಕದ ಬೆಳವಣಿಗೆಯಾಗಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಯುವ ಸಮೂಹವನ್ನು ಬಲಿಪಡೆಯುತ್ತಿರುವ ಈ ಜಾಲದ ವಿರುದ್ಧ ಸರ್ಕಾರ ಮೌನವಾಗಿರುವುದು ಸರಿಯಲ್ಲ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.

- Advertisement - 

​ಪಂಜಾಬ್ ಸ್ಥಿತಿಗೆ ಹೋಲಿಕೆ-
​ಕರ್ನಾಟಕದ ಪ್ರಸ್ತುತ ಪರಿಸ್ಥಿತಿಯನ್ನು ಪಂಜಾಬ್ ರಾಜ್ಯದ ಹಳೆಯ ಸ್ಥಿತಿಗೆ ಹೋಲಿಸಿದ ರವಿ ಅವರು:

​ಒಂದು ಕಾಲದಲ್ಲಿ ಪಂಜಾಬ್ ಹೇಗೆ ಮಾದಕ ದ್ರವ್ಯಗಳ ಜಾಲಕ್ಕೆ ಸಿಲುಕಿ ನರಳಿತೋ, ಈಗ ಕರ್ನಾಟಕ ಕೂಡ ಅದೇ ಹಾದಿಯಲ್ಲಿ ಸಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ.

- Advertisement - 

​”ಇಂದು ಕರ್ನಾಟಕದಲ್ಲೂ ಉಡ್ತಾ ಕರ್ನಾಟಕಆಗುತ್ತಿರುವ ಲಕ್ಷಣಗಳು ಎದ್ದುಕಾಣುತ್ತಿವೆ” ಎಂದು ರವಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

​ಯುವಶಕ್ತಿ ಉಳಿಸಲು ಆಗ್ರಹ:
​ಮಾದಕ ದ್ರವ್ಯಗಳು ಕೇವಲ ವ್ಯಕ್ತಿಯನ್ನಲ್ಲ, ಇಡೀ ದೇಶವನ್ನೇ ನಾಶಪಡಿಸುವ ಶಕ್ತಿ ಹೊಂದಿವೆ ಎಂದು ಎಚ್ಚರಿಸಿದ ಅವರು, ತಕ್ಷಣವೇ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

​”ಮಾದಕ ದ್ರವ್ಯಗಳು ನಮ್ಮ ಯುವ ಜನರನ್ನು ಹಾಳುಗೆಡವಿ, ಆ ಮೂಲಕ ದೇಶವನ್ನೇ ನಾಶಪಡಿಸಲಿದೆ. ರಾಜ್ಯ ಸರ್ಕಾರ ತಕ್ಷಣವೇ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡು, ಡ್ರಗ್ಸ್ ಹಾವಳಿ ರಾಜ್ಯದಲ್ಲಿ ಹೆಡೆ ಎತ್ತದಂತೆ ಮಾಡಬೇಕು.”
ಸಿ.ಟಿ ರವಿ, ಶಾಸಕರು, ವಿಧಾನ ಪರಿಷತ್.

 

 

Share This Article
error: Content is protected !!
";