ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ಸತ್ಯ ಸಾಯಿ ಶಾಲೆಯಲ್ಲಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಕ್ಕಳಿಗೆ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.
ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಲು ಸಹಕಾರಿ ಆಗುವಂತಹ ರೂಬಿಕ್ಸ್ ಕ್ಯೂಬ್ ಇದರ ಬಗ್ಗೆ ತರಬೇತಿಯನ್ನು ಪಲ್ಲವಿ ಅವರು ನೀಡಿದರು.
ರೂಬಿಕ್ಸ್ ಕ್ಯೂಬ್ ಅನ್ನು ಆಡುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಹಾಗೂ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಪಲ್ಲವಿ ಅವರು ತಿಳಿಸಿದರು.
ಇನ್ನರ್ ವ್ಹೀಲ್ ಅಧ್ಯಕ್ಷೆ ಸುಚಿತ್ರ ಅಮರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜಯಶಾಲಿಗಳಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಸುಚಿತ್ರ ಅಮರ್ ರವರು ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ, ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಹಾಗೂ ಚಿತ್ರಕಲೆ, ನೃತ್ಯ.ಇವುಗಳಿಂದಲೂ ಮಕ್ಕಳಿಗೆ ಏಕಾಗ್ರತೆ ದೊರೆಯುತ್ತದೆ. ಈ ಶಾಲೆಯ ಮಕ್ಕಳು ತುಂಬಾ ಉತ್ಸಾಹದಿಂದ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಸತ್ಯಸಾಯಿ ಶಾಲೆಯವರು ಅಚ್ಚುಕಟ್ಟಾಗಿ ನೆರವೇರಿಸಿದ್ದು ತುಂಬಾ ಸಂತೋಷದಾಯಕ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಸದಸ್ಯರಾದ ಶ್ವೇತ, ಕಾರ್ಯದರ್ಶಿ ಇಂಪಾ, ಶಾಮಲಾ, ಸರ್ವ ಮಂಗಳ, ರೋಷಣಿ, ಸೌಮ್ಯ, ಪದ್ಮಜಾ, ಲಕ್ಷ್ಮಿ, ಜ್ಞಾನೇಶ್ವರಿ, ಸ್ವರ್ಣ ಮಂಗಳ ಗೌರಿ, ಕುಸುಮ ದೇಸಾಯಿ, ಸೌಜನ್ಯ, ರಮ್ಯ, ಲತಾ, ಕಾತ್ಯಾಯಿನಿ, ರಾಜಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.
ಸತ್ಯ ಸಾಯಿ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ್, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.