ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆ ವಿಶ್ವಕ್ಕೆ ಪಸರಿಸಿದ ದೀಕ್ಷಾ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿರಂತರ 216 ಗಂಟೆಗಳ (ಸತತ 9 ದಿನಗಳು ) ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ದಾಖಲೆ ಬರೆದು ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಪಸರಿಸುವ ಹೆಗ್ಗಳಿಕೆಯ ಗುರಿ ಸಾಧಿಸಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ದೀಕ್ಷಾ ವಿ ಅವರನ್ನು ಸಮಗ್ರ ಕರ್ನಾಟಕದ ಜನತೆಯ ಪರವಾಗಿ ಅಭಿನಂದಿಸುವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಈ ಹಿಂದೆ 170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ಪೂರೈಸಿ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಸಾಧನೆ ಮಾಡಿದ್ದ ರೆಮೋನಾ ಇವೆಟ್ ಪಿರೇರಾ ಅವರ ದಾಖಲೆಯನ್ನು

- Advertisement - 

ಮತ್ತೊಬ್ಬ ಕನ್ನಡತಿಯೇ ಹಿಂದಿಕ್ಕಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ವಿಶ್ವ ಸಂಸ್ಕೃತಿಯ ಭೂಪಟದಲ್ಲಿ ಕರ್ನಾಟಕದ ಹೆಗ್ಗುರುತು ದಾಖಲಿಸಿ ದೀಕ್ಷಾ ಮಹತ್ವದ ಕೊಡುಗೆ ನೀಡಿದ್ದಾರೆ ಅವರು ತಿಳಿಸಿದರು.

 

- Advertisement - 

Share This Article
error: Content is protected !!
";