ಫೆಂಗಲ್ ಚಂಡಮಾರು ಎಫೆಕ್ಟ್, ರಾಷ್ಟ್ರೀಯ ಹೆದ್ದಾರಿ ಕುಸಿತ

News Desk

ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಬಿಟ್ಟು ಬಿಡದಂತೆ ಕಾಡುತ್ತಿರುವ ಫೆಂಗಲ್ ಚಂಡಮಾರುತದ ಪರಿಣಾಮದಿಂದಾಗಿ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿದೆ. ಹೆದ್ದಾರಿ ಬದಿ ಗೇಲ್ ಗಾಸ್ ಕಂಪನಿ ಅಗೆದಿದ್ದ ಹೊಂಡದಲ್ಲಿ‌ನೀರು ತುಂಬಿ ಕೂಳೂರು ಬಳಿ ಮಂಗಳೂರು ಟು ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ.

ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಉಡಪಿಯಿಂದ ಮಂಗಳೂರಿಗೆ ಬರುವ ವಾಹನ ಸವಾರರು ಪರದಾಡುತ್ತಿದ್ದಾರೆ.

ಹೆದ್ದಾರಿ ಬದಿ ಗೇಲ್​​ಗಾಸ್ ಕಂಪನಿ ರಸ್ತೆ ಅಗೆದಿದ್ದರಿಂದ ಆ ಗುಂಡಿಯಲ್ಲೇ ಇದೀಗ ಮಳೆ ನೀರು ಶೇಖರಣೆಗೊಂಡು ಹೆದ್ದಾರಿ ಕುಸಿದಿದೆ. ಬೈಕ್, ಕಾರು, ಲಾರಿಗಳು ಪಾಸ್ ಆಗುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ರಸ್ತೆ ಕುಸಿದಿದೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

ರಸ್ತೆ ಕುಸಿತದ ಪಕ್ಕದಲ್ಲೇ ಭಾರೀ ವಾಹನಗಳು ಸಂಚಿರಿಸುತ್ತಿರುವುದರಿಂದ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ.

- Advertisement -  - Advertisement -  - Advertisement - 
Share This Article
error: Content is protected !!
";