ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿ.ಕೆ ಶಿವಕುಮಾರ ನೀವೇನೂ ಉಪಮುಖ್ಯಮಂತ್ರಿಯೋ? ಅಥವಾ ರಿಯಲ್ಎಸ್ಟೇಟ್ಏಜಂಟೋ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಸ್ವಾರ್ಥಕ್ಕಾಗಿ ರೈತರ ಜಮೀನುಗಳನ್ನು ಕಬಳಿಸಲು ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಿದ್ರಿ. BBMP 5 ಹೋಳು ಮಾಡಿ ಗ್ರೇಟರ್ಬೆಂಗಳೂರು ಮಾಡಿದ್ದಾಯ್ತು.
ಈಗ ತುಮಕೂರು ಜಿಲ್ಲೆಯಲ್ಲಿರುವ ಕುಣಿಗಲ್ತಾಲ್ಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸಿಕೊಳ್ಳಲು ಹೊರಟಿದ್ದೀರಿ ಏಕೆ ಎಂದು ಜೆಡಿಎಸ್ ಪ್ರಶ್ನಿಸಿದೆ.
ಇದೆಲ್ಲದರ ಹಿಂದಿನ ನಿಮ್ಮ ಅಜೆಂಡಾವಾದರೂ ಏನು? ನಿಮ್ಮ ಸಂಬಂಧಿಕ ರಾಜಕಾರಣಿಗಳಿರುವ ಕ್ಷೇತ್ರಗಳನ್ನು ಬೆಂಗಳೂರಿಗೆ ಸೇರಿಸಿ, ನಿಮ್ಮ ಕುಟುಂಬದ ಬೇನಾಮಿ ಆಸ್ತಿಗಳ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ದೂರಾಲೋಚನೆಯೇ ? ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

