ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವೇದಾವತಿ ನದಿ ದಂಡೆಯ ಹಿರಿಯೂರು
ಮಧ್ಯ ಕರ್ನಾಟಕದ ತವರು
ಸರ್ವಧರ್ಮ ಜನಾಂಗ ಸಮಾನ ಎಲ್ಲರೂ..||
ಸಂಗೀತ ಸಾಹಿತ್ಯ ಕಲೆಗಳ ಕಡಲು
ಶ್ರೀ ಶಕ್ತಿ ಗಣಪತಿ ಆಚರಣೆ ಒಂದು ತಿಂಗಳು
ಕಣ್ಣೆರಡು ಸಾಲದು ಸಡಗರ ಸಂಭ್ರಮ ನೋಡಲು..||
ಪ್ರಾಚೀನ ಕಾಲದ ಘನಪುರಿ
ಪಶ್ಚಿಮ ಬೆಟ್ಟ ಸಾಲುಗಳ ನಡುವೆ ಕಣಿವೆ ಮಾರಿ
ನಗರದ ಶಕ್ತಿ ದೇವತೆ ಶ್ರೀ ದುರ್ಗಾಪರಮೇಶ್ವರಿ..||
ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿ
ಹೇಮರೆಡ್ಡಿ ಮಲ್ಲಮ್ಮನ ಪುಣ್ಯಭೂಮಿ
ಈ ಮಣ್ಣಲ್ಲಿ ಹುಟ್ಟಿದ ನಾವುಗಳೇ ಧನ್ಯೋಸ್ಮಿ..||
ಕವಿತೆ:ವೇಣುಕುಮಾರ್. ಎಂ, ಭರಂಪುರ, ಹಿರಿಯೂರು.

