ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರಕ್ಕಾಗಿ ದಲಿತ ಸಚಿವರ ಹನಿಟ್ರ್ಯಾಪ್ ಅಧಿಕಾರಕ್ಕಾಗಿ ದಲಿತ ಸಚಿವರ ಕುಟುಂಬ ಸದಸ್ಯರ ಕೊಲೆಗೆ ಸುಪಾರಿ, ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ಕರ್ನಾಟಕದ ಸುಸಂಸ್ಕೃತ ರಾಜಕಾರಣಕ್ಕೆ ದೊಡ್ಡ ಕಪ್ಪು ಚುಕ್ಕೆ ಇಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ಇಂತಹ ಕೊಳಕು ರಾಜಕೀಯ ಮಾಡುತ್ತಿರುವ ಮಹಾನುಭಾವರು ಯಾರು ಅನ್ನುವುದನ್ನ ಪತ್ತೆ ಹಚ್ಚಿ ಕರ್ನಾಟಕದ ಜನತೆ ಮುಂದೆ ಅವರನ್ನ ಬೆತ್ತಲು ಮಾಡಿ. ಒಂದು ವೇಳೆ ಈ ಪ್ರಕರಣದ ತನಿಖೆಯನ್ನು ಹಳ್ಳ ಹಿಡಿಸಿದರೆ ತಾವೂ ಇದರಲ್ಲಿ ಶಾಮೀಲಾಗಿದ್ದೀರಿ ಎಂದು ಭಾವಿಸಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಸಿದ್ದಾರೆ.