ದಲಿತ ಮಹಿಳೆಗೆ ಅತ್ಯಾಚಾರ ಎಸಗಿ ಕೊಂದು ಹಾಕಿದ ಇಂಡಿ ಮೈತ್ರಿಕೂಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರ ಪ್ರದೇಶದ ಉಪ ಚುನಾವಣೆಯಲ್ಲಿ ದಲಿತ ಮಹಿಳೆ ಬಿಜೆಪಿ ಬೆಂಬಲಿಸಿದ ಕಾರಣಕ್ಕೆ ಇಂಡಿ ಮೈತ್ರಿಕೂಟದ ಸಮಾಜವಾದಿ ಪಕ್ಷದ ಗೂಂಡಾಗಳು, ದಲಿತ ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಗೋಣಿಚೀಲದಲ್ಲಿ ಕಟ್ಟಿ ಬೀಸಾಡಿ ಹೋಗಿದ್ದಾರೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಖದ್ದು ವಕ್ಫ್‌ಬೋರ್ಡ್‌ಗೆ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಬೆಂಬಲ ನೀಡುವ ಮೂಲಕ ದಲಿತರ ಆಸ್ತಿಪಾಸ್ತಿಯನ್ನು ಕಬಳಿಕೆ ಮಾಡಲಾಗುತ್ತಿದೆ. ದಲಿತರು ಎಂದರೆ ಯಾಕಿಷ್ಟು ದ್ವೇಷ? ಎಂದು ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";