ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನವರಾತ್ರಿ ಹಬ್ಬದ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳಿಗಾಗಿ ಹಿರಿಯೂರಿನ ಪುಷ್ಪಾಂಜಲಿ ಸಿನಿಮಾ ಮಂದಿರದ ರಸ್ತೆಯ ವೀನಸ್ ಪಾರ್ಟಿ ಹಾಲ್ ನಲ್ಲಿ ಎರಡನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗಾಗಿ ಡಿ.ಪಿ ಇವೆಂಟ್ ಮ್ಯಾನೇಜ್ಮೆಂಟ್ ತಂಡ ವಿಭಿನ್ನ ಪ್ರಯತ್ನಗಳೊಂದಿಗೆ “ದಾಂಡಿಯಾ ನೈಟ್ಸ್ ಮತ್ತು ದಸರಾ ನವರಾತ್ರಿ ವೈಭವ” ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಮಾರಂಭದಲ್ಲಿ ವಿವಿಧ ಗೇಮ್ಸ್, ಡಾನ್ಸ್, ಟ್ಯಾಲೆಂಟ್ ಕಾಂಪಿಟೇಶನ್, ಲಕ್ಕಿ ಡ್ರಾ ಏರ್ಪಡಿಸಲಾಯಿತು.
ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಆಸಕ್ತ ಮಹಿಳೆ ಮತ್ತು ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಯಿತು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕ ಡಿ. ಸುಧಾಕರ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್,
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾಗೇಂದ್ರ ನಾಯ್ಕ, ಮಾಜಿ ನಗರಸಭೆ ಸದಸ್ಯ ರವಿಚಂದ್ರ ನಾಯ್ಕ್, ಶಾರದಾಸ್ ಸ್ಪೋಟ್ಸ್, ಲಕ್ಕಿ ಇವೆಂಟ್ಸ್, ವಿಠ್ಠಲ್ ಮೊಬೈಲ್ಸ್, ಆಶ್ವಿನಿ ವಾಟರ್ ಸಪ್ಲೈರ್ಸ್ ಹಿರಿಯೂರು ಇವರುಗಳ ಸಹಕಾರ ನೀಡಿದ್ದರು.
ಸಂದೀಪ್ ಯಾದವ್, ಬಸವರಾಜ್ ಪ್ಯಾರಾಮೆಡಿಕಲ್ ಕಾಲೇಜು ಹಿರಿಯೂರು, ಸಮುದಾಯ ಆರೋಗ್ಯ ಅಧಿಕಾರಿ ಪ್ರಕೃತಿ ಪಾವಗಡ, ಉಪನ್ಯಾಸಕಿ ದಿವ್ಯಶ್ರೀ ಎಸ್. ಪಿ, ವಿದ್ಯಾನಿಧಿ ಪಿ. ಯು. ಕಾಲೇಜ್ ತುಮಕೂರು ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಮೂಡಿ ಬಂದಿತು.