ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಕಾಂಗ್ರೆಸ್ಸಿಗರಿಂದ ದೇಶಕ್ಕೆ ಅಪಾಯ: ಸಂಸದ ಕಾರಜೋಳ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇತ್ತೀಚಿನ ದಿನಮಾನಗಳಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ಮೇಲೆ ಅತ್ಯಂತ ಹಗುರವಾಗಿ ಹಾಗೂ ಬೇಜವ್ದಾರಿಯಿಂದ ಮಾತನಾಡುತ್ತಿರುವ ಕಾಂಗ್ರೆಸ್ಸಿಗರಿಂದ ದೇಶಕ್ಕೆ ಅಪಾಯ ಕಾದಿದೆ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ಟೀಕಾಪ್ರಹಾರ ಮಾಡಿದರು.

ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ದೇಶದ ಜನರು ಇದನ್ನು ಅರ್ಥಮಾಡಿಕೊಳ್ಳಬೇಕು, ಕಾಂಗ್ರೆಸ್ಸೇತರ ಪಕ್ಷಗಳು ಈ ದೇಶವನ್ನು ಆಳುತ್ತಿರುವ ಸಂಗತಿಯನ್ನು ಕಾಂಗ್ರೆಸ್ಸಿಗರಿಂದ ಸಹಿಸಿಕೊಳ್ಳಲಾಗುತ್ತಿಲ್ಲ, ಪದೇ ಪದೇ ಈ ದೇಶದ ಸ್ವಾಯತ್ತ ಸಂಸ್ಥೆಗಳಾದ ಇ.ಡಿ. ಇರಬಹುದು, ಸಿ.ಬಿ.ಐ. ಇರಬಹುದು ಚುನಾವಣಾ ಆಯೋಗ ಇರಬಹುದು ಇಂತಹ ಸಂಸ್ಥೆಗಳ ಮೇಲೆ ಕಾಂಗ್ರೆಸ್ಸಿಗರು ಅತ್ಯಂತ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಕಾಂಗ್ರೆಸ್ಸಿಗರು ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನೂ ಸಹ ಅನುಮಾನದಿಂದ ನೋಡುವ ಕಾಲ ದೂರವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.   

- Advertisement - 

  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಬೆಂಗಳೂರಿನ ಲೋಕಸಭಾ ಕ್ಷೇತ್ರವೊಂದರಲ್ಲಿ ಅದರಲ್ಲೂ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಯಾವ ರೀತಿ ಲೋಪವಾಗಿದೆ ಎಂಬುದನ್ನ ದಾಖಲೆಗಳ ಸಮೇತ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿ, ಅದನ್ನು ಬಿಟ್ಟು ಕೇವಲ ಬಿಟ್ಟಿ ಪ್ರಚಾರಕ್ಕಾಗಿ ಹಾದಿ ಬೀದಿಯಲ್ಲಿ ಮಾತನಾಡುತ್ತಾ ಹೋಗುವುದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶೋಭೆ ತರುವ ಕೆಲಸವಲ್ಲ ಎಂಬುದನ್ನು ರಾಹುಲ್ ಗಾಂಧಿ ಮನಗಾಣಬೇಕಾಗಿದೆ. ಚುನಾವಣಾ ಆಯೋಗದ ಮೇಲೆ ಯಾರಾದರೂ ಆರೋಪ ಮಾಡಿದರೆ ಆರೋಪ ಮಾಡಿದವರಿಗೆ ನೋಟಿಸ್ ನೀಡುವ ಹಕ್ಕು ಚುನಾವಣಾ ಆಯೋಗಕ್ಕಿದೆ,

ಅದೇ ರೀತಿ ಆರೋಪ ಮಾಡಿರುವ ರಾಹುಲ್ ಗಾಂಧಿಯವರಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ, ಇವರ ಬಳಿ ದಾಖಲೆಯಿದ್ದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಿ.

- Advertisement - 

ನಾನು ರಾಹುಲ್‌ಗಾಂಧಿಯವರಿಗೆ ಕೇಳಲು ಬಯಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ಪರೀಕ್ಷಾ ಮಂಡಳಿಗಳ ವ್ಯವಸ್ಥೆಯ ಮೂಲಕ ನಂಬಿಕೆ, ವಿಶ್ವಾಸ ಎಷ್ಟು ಅನಿವಾರ್ಯವೋ ಅದೇರೀತಿ ರಾಜಕೀಯ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೋರ್ಟ್‌ಗಳ ಮೇಲೆ ನಂಬಿಕೆ, ವಿಶ್ವಾಸ ಅಷ್ಟೇ ಮುಖ್ಯ. ಯಾವ ರೀತಿ ಡಾ.ಬಾಬಾ ಸಾಹೇಬ್ ಆಂಬೇಡ್ಕರ್‌ರವರು ಬರೆದಂತಹ ಸಂವಿಧಾನ ಭಾರತವನ್ನು ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ಮಾಡಿದೆಯೋ, ಅಂತಹ ಸಂವಿಧಾನ ನಮಗೆ ಬಲಿಷ್ಟವಾದಂತಹ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನ ನೀಡಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಇದೀಗ ರಾಹುಲ್‌ಗಾಂಧಿಯವರು ಚುನಾವಣಾ ಆಯೋಗ, ನ್ಯಾಯಾಂಗದ ವಿರುದ್ಧವಾಗಿ ರಾಷ್ಟ್ರದ ಜನತೆಯನ್ನ ದಂಗೆ ಏಳಲು ಪ್ರಚೋದಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಇದನ್ನ ಪ್ರತಿಯೊಬ್ಬ ಭಾರತೀಯ ನಾಗರೀಕರು ಖಂಡಿಸಲೇ ಬೇಕು. ೨೦೨೦ ರ ಚುನಾವಣೆಯಲ್ಲಿ ಅಮೇರಿಕಾದ ಅಧ್ಯಕ್ಷ ಟ್ರಂಪ್‌ರವರು ಸೋತಾಗ ಫಲಿತಾಂಶವನ್ನ ಧಕ್ಕರಿಸಿ, ಫ್ರಾಡ್ ಅಂತ ಅಪಪ್ರಚಾರ ಮಾಡಿದರು. ನಾನು ಕಾಂಗ್ರೆಸ್ ನಾಯಕರಿಗೆ ಕೇಳಿಲಿಕ್ಕೆ ಬಯಸುತ್ತೇನೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ೧೩೬ ಕ್ಷೇತ್ರ ಗೆದ್ದಾಗ ಯಾಕೆ ನೀವು ಚುನಾವಣಾ ಆಯೋಗದ ಮೇಲೆ ಅನುಮಾನ ಪಡಲಿಲ್ಲ.

ಇವತ್ತು ಪಂಜಾಬ್‌ನಲ್ಲಿ ಆಮ್‌ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದಿದೆ. ಅವಾಗ ಯಾಕೆ ನೀವು ಅನುಮಾನ ಪಡಲಿಲ್ಲ. ನಿಮ್ಮ ಪಕ್ಷ ಕಾಂಗ್ರೆಸ್ ಗೆದ್ದರೆ ಅಷ್ಟೆ ಚುನಾವಣೆ ಆಯೋಗ ಸರಿಯಿದೆ, ಚುನಾವಣೆ ವ್ಯವಸ್ಥೆ ಸರಿಯಿದೆ, ಚುನಾವಣೆ ಮತ ಯಂತ್ರಗಳು ಸರಿಯಿದ್ದಾವೆ. ಇಲ್ಲದಿದ್ದರೆ ಚುನಾವಣಾ ಆಯೋಗವು ಫ್ರಾಡ್ ಮಾಡಿದೆ ಅಂತ ಹೇಳಿಕೊಂಡು ಓಡಾಡುತ್ತಾ ಇದ್ದೀರಿ. ಇದು ನೀವು ಪ್ರತಿ ಪಕ್ಷದ ನಾಯಕರಾಗಿ ಲೋಕಸಭೆಯಂತ ಸಂವಿಧಾನಿಕ ಸಂಸ್ಥೆ  ದೇಶದಅತೀ ಶ್ರೇಷ್ಠವಾದಂತಹ ಸಂಸ್ಥೆಯ ಪ್ರತಿಪಕ್ಷದ ನಾಯಕರು ನೀವು.  ಪ್ರಜಾ ಪ್ರಭುತ್ವದ ವ್ಯವಸ್ಥೆಯ ಪ್ರತಿಪಕ್ಷದ ನಾಯಕರು ಈ ರೀತಿ ಸುಳ್ಳು ಆರೋಪ ಮಾಡುವುದರಿಂದ, ಬೀದಿ ನಾಟಕ ಮಾಡುವುದರಿಂದ ನೀವು ಬೀದಿ ಕಲಾವಿದರಾಗುತ್ತೀರಿ ಹೊರತು  ದೇಶದ ನಾಯಕರಾಗಲು ಸಾಧ್ಯವಿಲ್ಲ ಅಂತ ಹೇಳುವ ಮೂಲಕ ರಾಹುಲ್ ಗಾಂಧಿಯವರಿಗೆ ಎಚ್ಚರಿಕೆ ಕೊಡೋದಕ್ಕೆ ಬಯಸುತ್ತೇನೆ.

 ನಿನ್ನೆ ದಿನ ಕರ್ನಾಟಕದಲ್ಲಿ ನಡೆದಂತಹ ಅತ್ಯಂತ ಅಪಾಯಕಾರಿ ಬೆಳವಣಿಗೆ. ದಲಿತ ಮಂತ್ರಿ ಅತ್ಯುತ್ತಮ ಕೆಲಸಗಳನ್ನು ಮಾಡಿದಂತವರು. ಸುಮಾರು ೪೦ ವರ್ಷಗಳಿಗಿಂತಲೂ ಹೆಚ್ಚು ಕಾಲ ಕೆ.ಎನ್. ರಾಜಣ್ಣರವರು ಶಾಸಕರಾಗಿ, ಮಂತ್ರಿಯಾಗಿ ಸಮಾಜದಲ್ಲಿ ಗೌರವವನ್ನು ಊಳಿಸಿಕೊಂಡು ಬಂದಂತವರು, ಸಮಾಜ ಸೇವೆಯನ್ನು ಮಾಡಿದಂತವರು. ಅವರು ರಾಹುಲ್‌ಗಾಂಧಿಯವರ ಮತಗಳ್ಳತನದ ಆರೋಪವನ್ನು ಸಮರ್ಥಿಸಿಕೊಳ್ಳಲಿಲ್ಲ ಎನ್ನುವ ಕಾರಣದಿಂದ  ನೀವು ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತೆಸಿದ್ದೀರಿ. ನಾನು ರಾಹುಲ್‌ಗಾಂಧಿವರನ್ನ ಕೇಳ್ತೀನಿಸಿದ್ಧರಾಮ್ಯನವರನ್ನ ಕೇಳ್ತೀನಿ ನೀವು ಈ ರೀತಿ ಮಾಡುವುದರಿಂದ ದಲಿತರಿಗೆ ನ್ಯಾಯಕೊಡಲಿಕ್ಕೆ ಸಾಧ್ಯವಿಲ್ಲ.  

ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಅವಶ್ಯಕತೆ   ಇರುತಕ್ಕಂತಹದು ಅಹಿಂದ ವರ್ಗದ ಜನರಿಗೆ, ಮುಂದುವರೆದ ಶ್ರೀಮಂತರಿಗಲ್ಲ. ಮುಂದುವರೆದ ಶ್ರೀಮಂತರು ಬ್ರಿಟೀಷ್ ಸರ್ಕಾರದಲ್ಲೂ ಕೂಡ ಅವರ ಜೊತೆಯಲ್ಲಿ ಸಣ್ಣ ಇಲಾಖೆಯಲ್ಲಿ ಅಧಿಕಾರವನ್ನು ಪಡೆದಂತವರು, ಆಸ್ತಿಯನ್ನ ಪಡೆದಂತವರು, ಅಧಿಕಾರವನ್ನ ಅನುಭವಿಸಿದಂತವರು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾತ್ರ ಹಿಂದುಳಿದಂತಹ ದಲಿತರಿಗೆ ಅವಕಾಶ. ಅದಕ್ಕಾಗಿ ನಾನು ದೇಶದಜನತೆಗೆ ಹೇಳೋದಕ್ಕೆ ಬಯಸ್ತೇನೆ, ನಾಡಿನಜನತೆಗೆ ಹೇಳಲಿಕ್ಕೆ ಬಯಸ್ತೇನೆ.

ಇಂದು ಪ್ರಜಾ ಪ್ರಭುತ್ವದ ವ್ಯವಸ್ಥೆ ಅವಶ್ಯಕತೆ ಇರುವುದು ಕೆಳವರ್ಗದ ಜನತೆಗೆ ಹಾಗೂ ಶೋಷಣೆಗೆ ಒಳಗಾದವರಿಗೆ, ಅಸ್ಪೃಷ್ಯರಿಗೆ, ಅದಕ್ಕಾಗಿ ನಾನು ಕರ್ನಾಟಕದ ಜನತೆಗೆ ಹೇಳಲಿಕ್ಕೆ ಬಯಸ್ತೇನೆ ನೀವೆಲ್ಲರೂ ಕೂಡ ಕೆ.ಎನ್. ರಾಜಣ್ಣರವರಿಗೆ ಬೆಂಬಲಕ್ಕೆ ನಿಲ್ಲಬೇಕು ಹಾಗೂ ಕಾಂಗ್ರೆಸ್ ನೀತಿಯನ್ನ ಖಂಡಿಸಬೇಕು ಎಂದು ಕಾರಜೋಳ ತಿಳಿಸಿದರು.

Share This Article
error: Content is protected !!
";