ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ  ದರ್ಶನ್ ಕುಮಾರ್ ನಾಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿ ಧರ್ಮಾವರಂ ಲೇಔಟ್‌ನಿಂದ ಸುಮಾರು ೨೨ ವರ್ಷದ ದರ್ಶನ್ ಕುಮಾರ್ ಸಿ. ಎಂಬ ಯುವಕನು ೨೦೨೩ರ ಡಿಸೆಂಬರ್ ೨೮ರಿಂದ ಕಾಣೆಯಾಗಿದ್ದಾನೆ ಎಂದು ಈತನ ತಾಯಿ ಶ್ರೀಲಕ್ಷ್ಮಿ ಅವರು ದೂರು ನೀಡಿದ್ದಾರೆ.

   ಕಾಣೆಯಾದ ವ್ಯಕ್ತಿಯು ದಾವಣಗೆರೆ ನಗರದ ಎಸ್.ಎಸೈ.ಎಂ.ಎಸ್. ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗೆ ಓದಿನಲ್ಲಿ ಹೆಚ್ಚಿನ ಏಕಾಗ್ರತೆ ವಹಿಸಿದ್ದರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು. ಈತನು ೫.೨ ಅಡಿ ಎತ್ತರ, ದೃಢಕಾಯ ಶರೀರ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನಾರಾಯಣ ಕಾಲೇಜಿನ ಲೋಗೋ ಇರುವ ಕಡು ನೀಲಿ ಬಣ್ಣದ ಸ್ವೆಟರ್, ಬಿಳಿ ಗೆರೆಗಳಿರುವ ನೀಲಿ ಬಣ್ಣದ ಟೀ-ಷರ್ಟ್ ಹಾಗೂ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದನು.

     ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ.೦೮೧೩೬-೨೪೫೬೬೬, ಮೊ.ಸಂ.೯೪೮೦೮೦೨೯೭೭-೪೧ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

 

- Advertisement -  - Advertisement - 
Share This Article
error: Content is protected !!
";