ದರ್ಶಿನಿ ಕಾರ್ಯಕ್ರಮದ ತರಬೇತಿ ಶಿಬಿರ ಮುಕ್ತಾಯ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದರ್ಶಿನಿ ಕಾರ್ಯಕ್ರಮದಡಿ ಒದಗಿಸಲಾಗಿರುವ ಸಹಾಯಕ ಸಾಧನಗಳ ಬಳಕೆ ಹಾಗೂ ನಿರ್ವಹಣೆ ಕುರಿತು ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ
ನಡೆದ ಮೂರು ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯಗೊಂಡಿದ್ದು ತರಬೇತಿಯ ಸಂಯೋಜಕ ಬೈಲಾಂಜನೇಯ ಮೂರ್ತಿ ತರಬೇತಿದಾರರಾಗಿ ಗ್ರಂಥಾಲಯ ಮೇಲ್ವಿಚಾರಕರಿಗೆ ಹಾಗೂ
ವಿ ಆರ್ ಡಬ್ಲ್ಯೂ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ವೆಂಕಟರಾಜ್, ಮನೋಜ್,ಮಧು, ಲಕ್ಷ್ಮಿ ನಾರಾಯಣ, ಸೇರಿದಂತೆ ಹಲವರು ಹಾಜರಿದ್ದರು.

