ದಾವಣಗೆರೆ ಮತ್ತು ಬಾಗಲಕೋಟೆ ಕಾಂಗ್ರೆಸ್‌ಅಭ್ಯರ್ಥಿಗಳಿಗೆ ಬಿ-ಫಾರಂ ಹಸ್ತಾಂತರ: ಇಂದು ನಾಮಪತ್ರ ಸಲ್ಲಿಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಮುಂಬರುವ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ಅಭ್ಯರ್ಥಿಗಳಿಗೆ ಇಂದು ಅಧಿಕೃತವಾಗಿ
ಬಿ-ಫಾರಂಹಸ್ತಾಂತರಿಸಲಾಯಿತು.

​​ದಾವಣಗೆರೆ ದಕ್ಷಿಣ:
ಈ ಕ್ಷೇತ್ರಕ್ಕೆ ಸಮರ್ಥ್‌ಮಲ್ಲಿಕಾರ್ಜುನ ಅವರನ್ನು ಕಾಂಗ್ರೆಸ್‌ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದ್ದು
, ಸದಾಶಿವನಗರದ ನಿವಾಸದಲ್ಲಿ ಭಾನುವಾರ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿ-ಫಾರಂ ಹಸ್ತಾಂತರಿಸಿ ಶುಭ ಕೋರಿದರು.

- Advertisement - 

​ಬಾಗಲಕೋಟೆ ಕ್ಷೇತ್ರ:
ದಿವಂಗತ ಹೆಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಉಮೇಶ್ ಮೇಟಿ ಅವರ ಪರವಾಗಿ ಪಕ್ಷದ ಮುಖಂಡರಾದ ಮಂಜುನಾಥ್ ಅವರು ಕೆಪಿಸಿಸಿ ಅಧ್ಯಕ್ಷರಿಂದ ಬಿ-ಫಾರಂ ಸ್ವೀಕರಿಸಿದರು.

- Advertisement - 

​ನಾಮಪತ್ರ ಸಲ್ಲಿಕೆ: ಮಾರ್ಚ್-23 ರಂದು ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

​ಗೆಲುವೇ ಗುರಿ:
ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಪಕ್ಷವನ್ನು ಒಮ್ಮತದಿಂದ ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ” ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಅಭ್ಯರ್ಥಿಗಳ ಘೋಷಣೆಯ ಬೆನ್ನಲ್ಲೇ ಉಭಯ ಕ್ಷೇತ್ರಗಳಲ್ಲಿ ಚುನಾವಣಾ ಕಣ ರಂಗೇರಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡುಬಂದಿದೆ.

 

Share This Article
error: Content is protected !!
";