ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಸಕ ಮುನಿರತ್ನ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಇಂಥ ಶಾಸಕರನ್ನು ಆಯ್ಕೆ ಮಾಡಿರುವ ಜನರ ಪರಿಸ್ಥಿತಿ ಏನೆಂದು ಅರ್ಥವಾಗುತ್ತದೆ. ಇವರ ವರ್ತನೆ ನೋಡಿದರೆ ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಅನಿಸುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.
ನಗರದ ಮತ್ತಿಕೆರೆ ಜೆಪಿ ಪಾರ್ಕ್ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇಂಥವರನ್ನ ಆಯ್ಕೆ ಮಾಡಿಕೊಂಡಿದಕ್ಕೆ ನಿಮ್ಮ ಮನಸ್ಸಿಗೆ ನೋವಾಗುತ್ತಿದೆಯೆಂದು ನನಗೆ ಚೆನ್ನಾಗಿ ಗೊತ್ತಿದೆ, ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ. ಇವರನ್ನು ಇಟ್ಟುಕೊಳ್ಳುವುದೋ, ಬೇಡವೋ ಎಂದು ಜನ ನಿರ್ಧರಿಸಿಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮ ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಸಾರ್ವಜನಿಕರು ಯಾರು ತಲೆಕೆಡಿಸಿಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ ಯಾವುದೂ ಶಾಶ್ವತವಲ್ಲ. ಆದರೆ ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ಇದು ಯಾವುದೇ ಅಭಿವೃದ್ಧಿ ಕಾರ್ಯಕ್ರಮವಲ್ಲ. ಯಾವುದೇ ಶಿಲಾನ್ಯಾಸ ಮಾಡುತ್ತಿಲ್ಲ, ಕಾಮಗಾರಿ ಉದ್ಘಾಟಿಸುತ್ತಿಲ್ಲ. ಜನರ ಜೊತೆ ನಡಿಗೆ ಕಾರ್ಯಕ್ರಮವಷ್ಟೇ. ಆರ್ಎಸ್ಎಸ್ ಶತಮಾನೋತ್ಸವ ವೇಳೆಯಲ್ಲಿ ವರ್ತನೆ ಸರಿಯಲ್ಲ. ಗಣವೇಷಧಾರಿಯಾಗಿ ಬಂದು ಆರ್ಎಸ್ಎಸ್ಗೆ ಬಿಜೆಪಿ ಶಾಸಕ ಮುನಿರತ್ನ ಅವಮಾನ ಮಾಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಮುನಿರತ್ನ ಸಿಟ್ಟು!-
ಶಾಸಕ ಮುನಿರತ್ನ ಆಕ್ರೋಶಗೊಂಡು ವೇದಿಕೆಯಲ್ಲಿ ಮೈಕ್ ಪಡೆಯುತ್ತಿದ್ದಂತೆಯೇ ಒಬ್ಬ ಸಂಸದರ ಫೋಟೋ ಇಲ್ಲ, ಶಾಸಕರ ಫೋಟೋನೂ ಇಲ್ಲ, ಇದೇನು ಸಾರ್ವಜನಿಕರ ಕಾರ್ಯಕ್ರಮನಾ? ಕಾಂಗ್ರೆಸ್ ಕಾರ್ಯಕ್ರಮನಾ? ಅಂತಾ ಅಬ್ಬರಿಸಿ ಡಿಕೆಶಿ ವಿರುದ್ಧ ಹರಿಹಾಯ್ದರು.

