ಕೃಷ್ಣೆಗೆ ಬಾಗಿನ ಸಮರ್ಪಿಸಿದ ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಂದು ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ, ಸಿಎಂ ಸಿದ್ದರಾಮಯ್ಯ ಅವರೊಂದಿಗೆ  ಕೃಷ್ಣಾ ನದಿಗೆ ಗಂಗಾಪೂಜೆ ಸಲ್ಲಿಸಿ  ಬಾಗಿನ ಅರ್ಪಿಸಿದೆ.

ಆಲಮಟ್ಟಿ ಜಲಾಶಯ ತುಂಬಿರುವುದರಿಂದ ರೈತರಲ್ಲಿ ಸಂತಸ ಮೂಡಿದ್ದು, ನಾಡಿನ ಜನತೆಗೆ ಒಳಿತಾಗಲಿ, ಅನ್ನದಾತರ ಬಾಳು ಹಸನಾಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಾರ್ಥಿಸಿದರು.

- Advertisement - 

ಕೃಷ್ಣಾ ಜಲಾಶಯ ಪೂರ್ಣ ಸಂಗ್ರಹ ಸಾಮರ್ಥ್ಯವಾದ 519.60 ಮೀಟರ್ ಅನ್ನು ತಲುಪಿದ್ದು, ಅಣೆಕಟ್ಟಿನಲ್ಲಿ 123.081 ಟಿಎಂಸಿ ನೀರು ಸಂಗ್ರಹವಿದೆ. ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿರುವ ಹಾಗೂ ಕುಡಿಯುವ ನೀರಿನ ಜೀವನದಿಯಾಗಿರುವ ಕೃಷ್ಣೆಗೆ ನಮನಗಳನ್ನು ಡಿ.ಕೆ ಶಿವಕುಮಾರ್ ತಿಳಿಸಿದರು.

 

- Advertisement - 

Share This Article
error: Content is protected !!
";