ಡಿಸಿಎಂ ಡಿಕೆಶಿ ಸದನದಲ್ಲಿ ಹುಲಿ, ಹೈಕಮಾಂಡ್‌ಮುಂದೆ ಇಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ  ಡಿ.ಕೆ ಶಿವಕುಮಾರ್ ಸದನದಲ್ಲಿ ಹುಲಿ, ಹೈಕಮಾಂಡ್‌ಮುಂದೆ ಇಲಿ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

ವಿಧಾನಸಭೆಯಲ್ಲಿ #RSS ಗೀತೆ ಹಾಡಿ ಇಟಲಿ ಕಾಂಗ್ರೆಸ್‌ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ರಣಹೇಡಿ ಡಿಕೆಶಿ ಅಧಿಕಾರ ಉಳಿಸಿಕೊಳ್ಳಲು, ಉಚ್ಛಾಟನೆಯಿಂದ ಪಾರಾಗಲು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. 

- Advertisement - 

ನಾಯಕ ಸಮುದಾಯದ ಸಚಿವರನ್ನು ಏಕಾಏಕಿ ಮಂತ್ರಿಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರಿಗೆ ಕ್ಷಮೆಕೇಳುವ ಒಂದು ಅವಕಾಶವನ್ನು ಸಹ ಹೈಕಮಾಂಡ್‌ನೀಡಿರಲಿಲ್ಲ. 

ಭಾರತೀಯ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ದಲಿತರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯ ಇದೆ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ.

- Advertisement - 

 

 

Share This Article
error: Content is protected !!
";