ಅವರೆ ಬೇಳೆ ಮೇಳ ಉದ್ಘಾಟಿಸಿದ ಡಿಸಿಎಂ ಡಿಕೆ ಶಿವಕುಮಾರ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀವಾಸವಿ ಪುಡ್ಸ್‌ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದಿನಿಂದ ಜನವರಿ 4ರವರೆಗೆ ಆಯೋಜಿಸಿರುವ 26ನೇ ವರ್ಷದ ಅವರೆಬೇಳೆ ಮೇಳ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಿದರು.

ರೈತರು ಬೆಳೆದ ಅವರೆಕಾಯಿಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಜೊತೆಗೆ ಅವರೆಕಾಯಿಯಿಂದ ತಯಾರಿಸಲಾದ ವೈವಿಧ್ಯಮಯ ಹಾಗೂ ವಿಶಿಷ್ಟ ಆಹಾರ ಪದಾರ್ಥಗಳ ಮೂಲಕ ಬೆಂಗಳೂರು ನಗರದ ಆಹಾರ ಪ್ರಿಯರ ಮನಗೆಲ್ಲುತ್ತಿದೆ ಎಂದು ಡಿಸಿಎಂ ಹೇಳಿದರು.

- Advertisement - 

ಬೆಂಗಳೂರು ಸುತ್ತಮುತ್ತಲಿನ ರೈತರು ಬೆಳೆದಿರುವ ಅವರೆಕಾಯಿ ಸವಿಯನ್ನು ಸವಿಯಲು ಅನೇಕರು ಅವರೆಕಾಯಿ ಮೇಳಕ್ಕೆ ಆಗಮಿಸಿದ್ದಾರೆ.

ಶ್ರೀವಾಸವಿ ಪುಡ್ಸ್‌ನವರು ಕಳೆದ 25 ವರ್ಷದಿಂದ ಅವರೆಕಾಯಿ ಮೇಳ ಏರ್ಪಡಿಸಿ, ರೈತರು ಹಾಗೂ ಬೆಂಗಳೂರು ನಾಗರಿಕರು ಸೇರಿ ಸಂಭ್ರಮಿಸಲು ಅವಕಾಶ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement - 

 

 

Share This Article
error: Content is protected !!
";