ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಪ್ರವಾಸಿ ಮಂದಿರದಲ್ಲಿ ನೀರಾವರಿ ಹೋರಾಟ ಸಮಿತಿಯಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಕಸವನಹಳ್ಳಿ ರಮೇಶ್ ಅವರು ತುಂಗಾ ನದಿಯಿಂದ ನೀರೆತ್ತಿ ಭದ್ರಾ ಡ್ಯಾಂಗೆ ಹಾಕುವ ಕಾಮಗಾರಿ ಇನ್ನೂ ವಿಳಂಬವಾಗಿದ್ದು ಕೇವಲ ಮೂರು ತಿಂಗಳು ಮಾತ್ರ ಕೆಲಸ ಮಾಡಬಹುದು. ಆನಂತರ ಮಳೆ ಬರುತ್ತದೆ.
ಆದರೆ ತುಂಗಾ ಕಾಮಗಾರಿ ಪ್ರದೇಶದಲ್ಲಿ ವೀಕ್ಷಣೆ ಮಾಡಿದಾಗ ಇಂಟೆಕ್ ಕಾಲುವೆಗಳು, ಸಬ್ ಸ್ಟೇಷನ್ ಕಾಮಗಾರಿಗಳು, ಮೋಟಾರ್ ಪಂಪ್ ಜೋಡಣೆ, ಡೆಲವರಿ ಪೈಪ್ ಲೈನ್ ಹಾಗೂ ಸೇತುವೆಗಳು ಸಿವಿಲ್ ಕಾಮಗಾರಿಗಳು ಆಮೆ ಗತಿಯಲ್ಲಿ ನಡೆಯುತ್ತಿವೆ ಎಂದು ಕಿಡಿಕಾರಿದರು.
ಮೂರು ತಿಂಗಳಲ್ಲಿ ಈ ಕಾಮಗಾರಿಗಳನ್ನು ಮುಗಿಸುವುದು ಅಸಾಧ್ಯದ ಮಾತು ಹಳೆಯ ಕಾಮಗಾರಿಗಳ ಹಣ ಪಾವತಿ ಮಾಡಿಲ್ಲದ ಕಾರಣ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ,
ಭದ್ರಾಕ್ಕೆ ಮೀಸಲಾದ ಅನುದಾನವನ್ನು ಬೇರೆಡೆಗೆ ವರ್ಗಾಯಿಸುವಲ್ಲಿ ಡಿ.ಕೆ ಶಿವಕುಮಾರ್ ಅವರ ಕೈವಾಡವಿದೆ . ಬರುವ ವರ್ಷದಿಂದ ತುಂಗಾ ದಿಂದ ಭದ್ರಾಕ್ಕೆ ನೀರು ಹರಿಸುತ್ತೇವೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅವರು ಆರೋಪಿಸಿದರು.
ಈಗಾಗಲೇ ಹೇಳಿರುವ ನೂರೊಂದು ಸುಳ್ಳುಗಳ ಜೊತೆ ಈ ಸುಳ್ಳು ಸಹ ಸತ್ಯವಾಗುತ್ತದೆ. ಆದರೆ ಇದು ಸುಳ್ಳಾಗಲಿ, ಭದ್ರಾ ನೀರು ಬಯಲು ಸೀಮೆಗೆ ಹರಿಯಲಿ ಎಂದು ತಿಳಿಸಿದರು.
ಸಭೆಯಲ್ಲಿ ಗೌರವಾಧ್ಯಕ್ಷ ಹೆಚ್.ಆರ್ ತಿಮ್ಮಯ್ಯ, ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ಖಜಾಂಚಿ ಬಬ್ಬೂರು ಸುರೇಶ್, ಉಪಾಧ್ಯಕ್ಷ ರಾಜೇಂದ್ರ, ನಿರ್ದೇಶಕರಾದ ಆರ್ ಕೆ ಗೌಡ್ರು, ಪಿಟ್ಲಾಲಿ ಶ್ರೀನಿವಾಸ್, ಮಂಜುನಾಥ್ ಮಾಳಿಗೆ, ಉದ್ಯಮಿ ಮಹಮದ್ ಶಪಿವುಲ್ಲಾ, ನಾರಾಯಣ್ ಆಚಾರ್ ಇದ್ದರು.

