ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್‌ಡಿ.ಕೆ ಶಿವಕುಮಾರ್ ನಿಮಗೆ ಅಧಿಕಾರದ ದರ್ಪ ತಲೆಗೇರಿದೆ ಎಂದು ಜೆಡಿಎಸ್ ಆರೋಪಿಸಿದೆ. ರಾಜ್ಯದ ಮೇಕೆದಾಟು ವಿಚಾರವಾಗಿ ಇಂಡಿ ಕೂಟದ ಕಾಂಗ್ರೆಸ್‌ಮಿತ್ರಪಕ್ಷ ತಮಿಳುನಾಡಿನ ಸ್ಟಾಲಿನ್‌ಸರ್ಕಾರವನ್ನು ಪ್ರಶ್ನಿಸುವ ಎದೆಗಾರಿಕೆ ಇಲ್ಲದ, ನೀವು ಕನ್ನಡ ಚಿತ್ರರಂಗದ ನಟ-ನಟಿಯರಿಗೆ ಗೊಡ್ಡು ಬೆದರಿಕೆ ಹಾಕುತ್ತೀರಿ?
ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್‌ಪಕ್ಷದ ತಾಳಕ್ಕೆ ಕುಣಿಯದ ಚಿತ್ರರಂಗ ಹಾಗೂ ಕಲಾವಿದರ ಮೇಲೆ ಅಸೂಯೆ, ದ್ವೇಷ ಕಾರುವುದು ಎಷ್ಟು ಸರಿ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ತಮಿಳುನಾಡಿನ ಜೊತೆಗೆ ಅಡ್ಜಸ್ಟ್‌ಮೆಂಟ್‌ರಾಜಕೀಯ ಮಾಡಿಕೊಂಡು, ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್‌ಪಕ್ಷವನ್ನು ಯಾಕೆ ಬೆಂಬಲಿಸಬೇಕು ?
ಉಪಮುಖ್ಯಮಂತ್ರಿ ಎಂಬುದನ್ನು ಮರೆತು, ಪಾಳೆಗಾರನಂತೆ ಹೆದರಿಸುವ, ಬೆದರಿಸುವ ಸೊಕ್ಕಿನ ಮಾತುಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಚ್ಚರಿಕೆ! ಎಂದು ಜೆಡಿಎಸ್ ಎಚ್ಚರಿಸಿದೆ.

