ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದ ಬಳಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಕೈಗೊಂಡಿರುವ ವೈಟ್‌ಟಾಪಿಂಗ್ ಕಾಮಗಾರಿಯನ್ನು ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪರಿಶೀಲಿಸಿದರು.
ಹಾಗೆಯೇ ಕಾಮಗಾರಿಯ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಬ್ರ್ಯಾಂಡ್‌ಬೆಂಗಳೂರು ಯೋಜನೆಯಡಿ ಎಂಇಐ ರಸ್ತೆ ಹಾಗೂ ಜಾಲಹಳ್ಳಿ ಟಿವಿಎಸ್ ಕ್ರಾಸ್ ಬಳಿಯ 100 ಅಡಿ ರಿಂಗ್ ರಸ್ತೆಯಲ್ಲಿ ಕೈಗೊಂಡಿರುವ ವೈಟ್‌ಟಾಪಿಂಗ್ ಕಾಮಗಾರಿಯನ್ನು ಶಿವಕುಮಾರ್ ಅವರು ಪರಿಶೀಲಿಸಿದರು.
ಬೆಂಗಳೂರಿನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಬ್ರ್ಯಾಂಡ್‌ಬೆಂಗಳೂರು ಯೋಜನೆಯಡಿ ಮಹಾಲಕ್ಷ್ಮಿ ಲೇಔಟ್‌ನ 10ನೇ ಅಡ್ಡರಸ್ತೆಯಲ್ಲಿ ಕೈಗೊಂಡಿರುವ ವೈಟ್‌ಟಾಪಿಂಗ್ ಕಾಮಗಾರಿಯನ್ನು ಶಿವಕುಮಾರ್ ಅವರು ಪರಿಶೀಲಿಸಿ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು.