ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಕುರ್ಚಿಯ ಆಸೆ ಬಿಚ್ಚಿಡುತ್ತಾ ಸಿಎಂಸಿದ್ದರಾಮಯ್ಯ ಹಾಗೂ ನನ್ನ ನಡುವೆ ಒಪ್ಪಂದ ಆಗಿದೆ ಎಂದು ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗೆ ಇಳಿಯುವುದು ಪೂರ್ವನಿರ್ಧರಿತ ಎಂಬರ್ಥದ ಹೇಳಿಕೆಯದು ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆಗೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಹೇಳುವ ಮೂಲಕ ಟಾಂಗ್‌ನೀಡಿದ್ದಾರೆ.
ಕಾಂಗ್ರೆಸ್ಸಿನ ಈ ಕುರ್ಚಿ ಜಗಳ ಭ್ರಷ್ಟಾಚಾರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮತ್ತೊಬ್ಬ ಪರಮ ಭ್ರಷ್ಟಾಚಾರಿ ಡಿಕೆಶಿ ಅವರನ್ನು ಪಟ್ಟಕ್ಕೇರಿಸುವವರೆಗೆ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಪಟ್ಟದ ಆಸೆಯಲ್ಲಿ ಎಲ್ಲರೂ ಕುರ್ಚಿಯ ಸುತ್ತಲೂ ತಿರುಗುತ್ತಿದ್ದಾರೆಯೇ ವಿನಃ ರಾಜ್ಯದ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ ಎಂದು ಬಿಜೆಪಿ ದೂರಿದೆ.
ವಾಲ್ಮೀಕಿ, ಮುಡಾ ಪ್ರಕರಣದ ನೈತಿಕ ಹೊಣೆ ಹೊತ್ತುಕೊಂಡು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಮೊಂಡುತನ ಪ್ರದರ್ಶಿಸಿದ ಸಿದ್ದರಾಮಯ್ಯ ಇನ್ನೂ ಕುರ್ಚಿಯಲ್ಲಿ ಮುಂದುವರೆಯುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಕೆಳಗಿಳಿಯಬೇಕಾಗಿದ್ದ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಪೂರ್ಣ ಬೆಂಬಲ ನೀಡಿದ್ದಾರೆ, ಏಕೆಂದರೆ ಡಿಕೆಶಿ ಅವರಿಗೆ ಸ್ಪಷ್ಟವಾಗಿ ತಿಳಿದಿದೆ, ಸಿದ್ದರಾಮಯ್ಯ ಅವರು “ಒಪ್ಪಂದದ ಮೇರೆಗೆ” ಮುಖ್ಯಮಂತ್ರಿ ಎಂಬುದು! ತಿಳಿಯುತ್ತದೆ ಎಂದು ಹೇಳಿದರು.