ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಲಸಂಪನ್ಮೂಲ ಇಲಾಖೆಯ ರಾಜ್ಯ ಜಲ ನೀತಿ 2022 – ಅಂತರ ಇಲಾಖೆಗಳ ರಾಜ್ಯ ಜಲಸಂಪನ್ಮೂಲ ಪ್ರಾಧಿಕಾರದ ಮೊದಲ ಸಭೆಯಲ್ಲಿ ಸಚಿವ ಎನ್.ಎಸ್.ಭೋಸರಾಜು ಹಾಗೂ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಾಲ್ಗೊಂಡು ಸಭೆ ನಡೆಸಿದರು.
ರಾಜ್ಯದ ಜಲಸಂಬಂಧಿತ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಕುರಿತು ಡಿಸಿಎಂ ಮತ್ತು ಸಚಿವರು ಮಹತ್ವದ ಸಭೆ ಮಾಡಿ ಚರ್ಚಿಸಿದರು.

