ಬಾಗೇಪಲ್ಲಿಯನ್ನು ಭಾಗ್ಯನಗರವೆಂದು ನಾಮಕರಣ ಮಾಡಿದ ಡಿಸಿಎಂಗೆ ಸನ್ಮಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಗೇಪಲ್ಲಿಯನ್ನು ಭಾಗ್ಯನಗರವೆಂದು ನಾಮಕರಣ ಮಾಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದಕ್ಕಾಗಿ ಶಾಸಕ ಎಸ್.ಎನ್.ಸುಬ್ಬಾ ರೆಡ್ಡಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಗೃಹಕಚೇರಿಯಲ್ಲಿ ಭೇಟಿಯಾಗಿ ಧನ್ಯವಾದ ತಿಳಿಸಿದರು.

ಬಾಗೇಪಲ್ಲಿಗೆ ಮರು ನಾಮಕರಣ ಮಾಡಬೇಕೆನ್ನುವುದು ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿತ್ತು. ಈ ಬಗ್ಗೆ ಸುಬ್ಬಾರೆಡ್ಡಿಯವರು ಕೂಡ ಅನೇಕ ಬಾರಿ ನಮ್ಮ ಗಮನಕ್ಕೆ ತಂದಿದ್ದರು ಎಂದು ಶಿವಕುಮಾರ್ ತಿಳಿಸಿದರು.

- Advertisement - 

ಶಾಸಕರ ಮತ್ತು ಅಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿದ ಸಂತೃಪ್ತಿ ನಮಗಿದೆ. ಹೆಸರಿಗೆ ತಕ್ಕಂತೆ ಭಾಗ್ಯನಗರಕ್ಕೆ ಭಾಗ್ಯಗಳು ಲಭಿಸಲಿ ಎಂದು ಡಿಸಿಎಂ ಹಾರೈಸಿದರು.

 

- Advertisement - 

Share This Article
error: Content is protected !!
";