ಉಣ್ಣುವ ಅನ್ನದ ಹಿಂದೆ ಕಾರ್ಮಿಕರ ಬೆವರಿನ ಹನಿ ಇದೆ-ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾವು ಪ್ರತಿದಿನ ಕ್ರಮಿಸುವ ರಸ್ತೆಗಳು
, ಪ್ರವೇಶಿಸುವ ಕಟ್ಟಡಗಳು, ಉಣ್ಣುವ ಅನ್ನದ ಹಿಂದೆ ಕಾರ್ಮಿಕರ ಬೆವರಿನ ಹನಿ ಇದೆ. ಕಾರ್ಮಿಕರು ದೇಶದ ಪ್ರಗತಿಯ ಬೆನ್ನೆಲುಬು. ಕಠಿಣ ಪರಿಶ್ರಮ, ಘನತೆಯ ದುಡಿಮೆಯ ಮೂಲಕ ಅವರು ಹಾಕುವ ಪ್ರತಿಯೊಂದು ಅಡಿಪಾಯವೂ ನಮ್ಮ ಸುಂದರ ನಾಳೆಗಳನ್ನು ನಿರ್ಮಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಮ್ಮ ಸರ್ಕಾರ ಸದಾ ಕಾರ್ಮಿಕರ ಪರವಾಗಿದ್ದು
, ಅವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ದುಡಿಮೆಯನ್ನೇ ದೇವರೆಂದು ಕಾಯಕ ತತ್ವವನ್ನು ಪಾಲಿಸುತ್ತಿರುವ ಎಲ್ಲಾ ಶ್ರಮಿಕ ಬಂಧುಗಳಿಗೂ ವಿಶ್ವ ಕಾರ್ಮಿಕರ ದಿನದ ಶುಭಾಶಯಗಳನ್ನು ಎಂದು ಡಿಸಿಎಂ ತಿಳಿಸಿದ್ದಾರೆ.

ಪೌರಕಾರ್ಮಿಕರ ಕಲ್ಯಾಣ ಸಬಲ ರಾಷ್ಟ್ರ ನಿರ್ಮಾಣ!
ಕಾರ್ಮಿಕ ದಿನಾಚರಣೆಯ ಶುಭಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 12,692 ಪೌರಕಾರ್ಮಿಕರ ಕೆಲಸವನ್ನು ಖಾಯಂಮಾತಿಗೊಳಿಸಿ, ಅವರಿಗೆ ಸೇವಾ ಖಾಯಂ ಪತ್ರ ವಿತರಿಸುವ ಮಹತ್ವಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಸರ್ಕಾರ ಶ್ರಮಿಕರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ಮೂಲಕ ನಗರವನ್ನು ಸ್ವಚ್ಛವಾಗಿಡುವ ಕೈಗಳಿಗೆ ಇನ್ನಷ್ಟು ಶಕ್ತಿಯನ್ನು ತುಂಬುತ್ತಿದ್ದೇವೆ. ಬನ್ನಿ, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಶ್ರಮಿಕರ ದಿನದಂದೇ ಪೌರಕಾರ್ಮಿಕರ ಕಲ್ಯಾಣ!
ಕಾಂಗ್ರೆಸ್ ಸರ್ಕಾರ ಪ್ರತಿ ಹಂತದಲ್ಲೂ ಪೌರಕಾರ್ಮಿಕರ ಜೊತೆಯಲ್ಲಿ ನಿಂತಿದೆ. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ 12,692 ಪೌರ ಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಿ, ಅವರ ಬದುಕಿನಲ್ಲಿ ಹೊಸ ಬದಲಾವಣೆ ತರುತ್ತಿದೆ. ಅವರ ವೇತನವನ್ನು 50,000 ರೂ.ವರೆಗೆ ಹೆಚ್ಚಿಸಿ ಹೊಸ ಅಭಿವೃದ್ಧಿಯ ಮಾದರಿಯನ್ನು ನಿರ್ಮಿಸಿದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.

ಪೌರಕಾರ್ಮಿಕರ ಅಭಿವೃದ್ಧಿಗಾಗಿ ಬಿಬಿಎಂಪಿ ಬಜೆಟ್‌ನಲ್ಲಿ 730 ಕೋಟಿ ರೂ. ಮೀಸಲಿಟ್ಟಿದೆ. ಪೌರಕಾರ್ಮಿಕರ ಪಿಂಚಣಿಗಾಗಿ 107 ಕೋಟಿ ರೂ. ಮೀಸಲಿಟ್ಟು, ರಾಜ್ಯ ಸರ್ಕಾರ ಪೌರಕಾರ್ಮಿಕರ ಪರವಾಗಿದೆ ಎಂದು ಸಾಬೀತುಪಡಿಸಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಬಹುದಿನಗಳ ಕನಸು – ಗ್ಯಾರಂಟಿ ಸರ್ಕಾರದಿಂದ ನನಸು!
ದುಡಿಯುವ ಕೈಗಳು ಸಬಲವಾಗಿದ್ದರೆ ನಮ್ಮ ಸಮಾಜ ಸದೃಢವಾಗಿರುತ್ತದೆ. ಪೌರಕಾರ್ಮಿಕರ ಶ್ರಮವನ್ನು ಗುರುತಿಸಿ
, ಅವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.

ಮಳೆ, ಚಳಿ, ಬಿಸಿಲು, ಧೂಳು ಲೆಕ್ಕಿಸದೆ ಕೆಲಸ ಮಾಡಿ ನಗರವನ್ನು ಸ್ವಚ್ಛವಾಗಿರಿಸಿ ನಾಗರಿಕರನ್ನು ಆರೋಗ್ಯವಾಗಿಡುವ ಪೌರ ಕಾರ್ಮಿಕರ ಸೇವೆ ಅಮೂಲ್ಯ. ಬಿಬಿಎಂಪಿಯಲ್ಲಿ ಗುತ್ತಿಗೆ ಮತ್ತು ನೇರ ವೇತನದಲ್ಲಿ ಕೆಲಸ ಮಾಡುತ್ತಿರುವ 12,692 ಪೌರ ಕಾರ್ಮಿಕರನ್ನು ಖಾಯಂಮಾತಿಗೊಳಿಸಲಾಗಿದೆ. ಇದರಿಂದ ಹಲವಾರು ಸೌಲಭ್ಯಗಳು ಸಿಗಲಿವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

 

Share This Article
error: Content is protected !!
";