ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ 2024 ಕುರಿತು ವಿಕಾಸಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪಾಲ್ಗೊಂಡರು.
ನಂತರ ಮಾತನಾಡಿ ಶಿವಕುಮಾರ್, ರೈತರನ್ನು ಉಳಿಸುವುದು ಈ ಅಧಿನಿಯಮದ ಪರಮ ಗುರಿಯಾಗಿದೆ. ಉಪ ಆಯುಕ್ತರಿಗಿದ್ದ ಅಧಿಕಾರವನ್ನು ಈಗ ಸೂಪರಿಂಟೆಂಡೆಂಟ್ ಇಂಜಿನಿಯರ್‌ಗಳಿಗೆ ನೀಡಲಾಗಿದೆ. ರೈತರ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಈ ಮಹತ್ತರ ಬದಲಾವಣೆ ತರಲಾಗಿದೆ ಎಂದು ಅವರು ತಿಳಿಸಿದರು.
ಕೆಆರ್‌ಎಸ್‌ನೀರು ಮಳವಳ್ಳಿ ಭಾಗಕ್ಕೆ ತಲುಪುತ್ತಿಲ್ಲ, ನಾಲೆಗಳಿಗೆ ರೈತರು ನೀರಿನ ಕೊಳವೆಗಳನ್ನು ಹಾಕುತ್ತಿರುವುದು ಇದಕ್ಕೆ ಕಾರಣ.
ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನೆ ಸಮಯದಲ್ಲೂ ಈ ರೀತಿ ಮಾಡುತ್ತಿರುವುದನ್ನು ನೋಡಿದ್ದೇನೆ. ಯೋಜನೆಯ ಫಲಾನುಭವಿಗಳಿಗೆ ನೀರು ತಲುಪುವಂತೆ ಮಾಡಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಚಿವರು ತಾಕೀತು ಮಾಡಿದರು.