ನವದೆಹಲಿಯಲ್ಲಿ ಕುಮಾರಸ್ವಾಮಿ ಅವರನ್ನ ಮೈಸೂರು KSRTC ಸಿಬ್ಬಂದಿಯ ಆತ್ಮೀಯ ಭೇಟಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಅಧ್ಯಯನ ಪ್ರವಾಸದ ನಿಮಿತ್ತ ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡಿರುವ ಮೈಸೂರು ಜಿಲ್ಲೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಸೌಜನ್ಯಯುತ ಚರ್ಚೆ ನಡೆಸಿದರು.

​ಮೈಸೂರಿನಿಂದ ಆಗಮಿಸಿದ್ದ ಸಾರಿಗೆ ಸಿಬ್ಬಂದಿಯನ್ನು ಆತ್ಮೀಯವಾಗಿ ಕೇಂದ್ರ ಸಚಿವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳೊಂದಿಗೆ ಅವರ ವೃತ್ತಿಜೀವನ, ಪ್ರವಾಸದ ಅನುಭವ ಹಾಗೂ ಸಾರಿಗೆ ಸಂಸ್ಥೆಯ ಅಭಿವೃದ್ಧಿಯ ಕುರಿತು ಆಪ್ತವಾಗಿ ಸಂವಾದ ನಡೆಸಲಾಯಿತು.

- Advertisement - 

​ಯುಗಾದಿ ಹಬ್ಬದ ಸಂಭ್ರಮ:
ಇದೇ ಸಂದರ್ಭದಲ್ಲಿ ಮುಂಬರುವ ಸಾಂಪ್ರದಾಯಿಕ ಹೊಸ ವರ್ಷ ಯುಗಾದಿಹಬ್ಬದ ಪ್ರಯುಕ್ತ ಪ್ರವಾಸದಲ್ಲಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಹಾಗೂ ಅವರ ಕುಟುಂಬದವರಿಗೆ ಕುಮಾರಸ್ವಾಮಿ ಅವರು ಶುಭ ಕೋರಿದರು. ದೂರದ ಊರಿನಲ್ಲಿದ್ದರೂ ಹಬ್ಬದ ಸಡಗರವನ್ನು ಹಂಚಿಕೊಳ್ಳುವ ಮೂಲಕ ಈ ಭೇಟಿ ವಿಶೇಷವಾಗಿತ್ತು.

- Advertisement - 

​”ಮೈಸೂರಿನ ಸಾರಿಗೆ ನೌಕರರು ಸಿಬ್ಬಂದಿ ನಮ್ಮ ಮನೆಗೆ ಭೇಟಿ ನೀಡಿದ್ದು ಸಂತಸ ತಂದಿದೆ. ಅವರ ಶ್ರಮ ಮತ್ತು ಸೇವೆ ಶ್ಲಾಘನೀಯ. ಎಲ್ಲರಿಗೂ ಮುಂಚಿತವಾಗಿ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕುಮಾರಸ್ವಾಮಿ ಕೋರಿದರು.”

Share This Article
error: Content is protected !!
";