ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೇ.3 ರಂದು ಮಧ್ಯಾಹ್ನ 1:30 ಗಂಟೆಗೆ ಚಿತ್ರದುರ್ಗ ಹತ್ತಿರದ ಬೊಮ್ಮೇನಹಳ್ಳಿ ಗ್ರಾಮದ ರೈಲು ಹಳಿಗಳ ಮೇಲೆ ಸುಮಾರು 45 ವರ್ಷದ ವ್ಯಕ್ತಿ ಪ್ಯಾಸೇಂಜರ್ ರೈಲುಗಾಡಿಗೆ ಸಿಕ್ಕಿ ತ್ರೀವ್ರತರನಾಗಿ ಗಾಯಗೊಂಡಿದ್ದಾನೆ. ಈ ವ್ಯಕ್ತಿಯನ್ನು ಹೊಳಲ್ಕೆರೆ ಆಸ್ಪತ್ರೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿರುತ್ತಾನೆ. ಈ ಕುರಿತು ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯು ಸಮಾರು 40 ರಿಂದ 50 ವರ್ಷದವನಾಗಿದ್ದು, 5.5 ಅಡಿ ಎತ್ತರ, ಅಗಲವಾದ ಮುಖ, ಸಾಧಾರಣ ಮೈಕಟ್ಟು, ಕಪ್ಪುಬಿಳಿ ಮಿಶ್ರಿತ ಕೂದಲು ಹಾಗೂ ಗಡ್ಡ ಬಿಟ್ಟಿರುತ್ತಾನೆ.
ಅಪಘಾತ ನಡೆದ ವೇಳೆಯಲ್ಲಿ ಹಳದಿ ಬಣ್ಣದ ಚೆಕ್ಸ್ ರೆಡಿಮೇಡ್ ಶರ್ಟ್, ಬಿಳಿ ಬಣ್ಣದ ಸ್ಯಾಂಡೋ ಬನಿಯನ್, ರಾಮ್ ರಾಜ್ ನೀಲಿ ಅಂಡರ್ ವೇರ್, ಹಸಿರು ಬಣ್ಣದ ಪಟ್ಟಿ ಪಟ್ಟಿ ಪಂಚೆ ಧರಿಸಿರುತ್ತಾನೆ. ಮೃತ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ದಾವಣಗೆರೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08192-259643, ಮೊಬೈಲ್ ಸಂಖ್ಯೆ 9480802123, ರೈಲ್ವೇ ಕಂಟ್ರೋಲ್ ರೂಮ್ 080-22871291 ಗೆ ಕೆರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.