ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮುಂಗಾರು ಮಳೆ ಬಂದ ಕಾರಣ ನಾಗರ ಕೆರೆ ಯಲ್ಲಿ ನೂರಾರು ಮೀನುಗಳು ಮೃತಪಟ್ಟಿರುವುದು ಕಂಡು ಬಂದಿದೆ.
ಮೀನುಗಳು ಮೃತಪಡಲು ಕಾರಣ ನಾಗರ ಕೆರೆಯಲ್ಲಿ ಒಳಚರಂಡಿ ಪೈಪ್ ಲೈನ್ ಅಳವಡಿಸಲಾದ ಪೈಪ್ ನಿಂದ ಕಲುಷಿತ ನೀರು ಸೋರಿಕೆಯಿಂದ ಮೀನು ಸಾವಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ಇದಲ್ಲದೆ ನಗರಸಭೆ ವ್ಯಾಪ್ತಿಯಿಂದ ಶನಿವಾರ ಮುಂಗಾರು ಪೂರ್ವ ಮೊದಲ ಮಳೆ ಬಿದ್ದಿದ್ದರಿಂದ ರಸ್ತೆಗಳಲ್ಲಿನ ಹಾಗೂ ಚರಂಡಿಗಳಲ್ಲಿ ನಿಂತಿದ್ದ ಕೊಳಚೆ ನೀರು ಹರಿದು ಕೆರೆ ಅಂಗಳ ಸೇರಿದೆ. ಈ ಎಲ್ಲಾ ಕಾರಣಗಳಿಂದ ಮೀನು ಮೃತ ಪಟ್ಟರಬಹುದು ಎಂದು ಪರಿಸರವಾದಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ನಾಗರ ಕೆರೆಯಲ್ಲಿನ ಅಳವಡಿಸಲಾದ ಒಳಚರಂಡಿ ಪೈಪ್ ತೆರವು ಮಾಡಬೇಕು. ಕೆರೆಯ ಪುನಶ್ವೇತನಗೊಳಿಸಿ, ನಗರದ ಕೊಳಚೆಯ ನೀರು ಕೆರೆ ಸೇರದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆ ಶಾಸಕ ಧೀರಜ್ ಮುನಿರಾಜ್ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತಾ ಕಾರ್ಯ ಹಾಗೂ ಮೀನುಗಳ ಉಳಿವಿಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ನಗರ ಸಭಾ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.