ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ಹಿಮಾಲಯದಲ್ಲಿ ಸುನಾಮಿ ಆದೀತು, ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸಂಭವಿಸುವ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಅಲ್ಲದ ಉತ್ತರ ರಾಷ್ಟ್ರಗಳಿಗೆ ಜಲಬಾಧೆ ಮತ್ತು ಅಪಾಯವಿದೆ ಎಂದು ಅರಸೀಕೆರೆಯ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (ಕೋಡಿಶ್ರೀ) ಭಯಾನಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೊಟೆಯಲ್ಲಿ ಮಾತನಾಡಿದ ಕೋಡಿಮಠದ ಸ್ವಾಮೀಜಿ, ದೇಶದ ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ. ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಕೊಲೆ ಆಗಬಹುದು ಅಥವಾ ಅಪಘಾತದಲ್ಲಿ ಸಾಯಬಹುದು ಎಂದು ಆಘಾತಕಾರಿ ಭವಿಷ್ಯ ನುಡಿದ್ದಾರೆ.
ಮತ್ತೊಂದು ಮರಣಾಂತಿ ರೋಗ:
ಕೊರೋನಾ ಬಳಿಕ ದೇಶದಲ್ಲಿ ಮತ್ತೊಂದು ರೋಗ ಬರಲಿದೆ. ಈ ಸಂವತ್ಸರದಲ್ಲಿ ಪ್ರಾಕೃತಿಕವಾಗಿ ಜಗತ್ತಿನಾದ್ಯಂತ ಅಪಾಯವಿದೆ. ಸೂಳೆಯ ಮಗನು ಹುಟ್ಟಿ ಆಳುವನು ಮುನಿಪುರವ. ಯುದ್ದವಿಲ್ಲದ ಮಡಿಯೆ ಪುರವೆಲ್ಲ ಕೋಳಾದೀತು. ಅರಸನಾಲಯಕ್ಕೆ ಕಾರ್ಮೋಡ ಕವಿದೀತಿ ಸ್ಟೇಟ್ ಗೂ ಇದೆ ಸೆಂಟ್ರಲ್ ಗೂ ಇದೆ ಇದು. ನೋಡ್ತಿ ಗೊತ್ತಾಗುತ್ತದೆ ರಿಸಲ್ಟ್. ಯುದ್ದ ಭೀತಿ ಸಾವು ನೋವು ಇರುತ್ತದೆ. ದೊಡ್ಡ ರೋಗ ಬರುತ್ತದೆ ಐದು ವರ್ಷ ಇರುತ್ತದೆ ಎಂದು ಸ್ವಾಮೀಜಿಗಳು ಎಚ್ಚರಿಕೆ ನೀಡಿದರು.
ನಾನುಭವಿಷ್ಯ ಹೇಳೋದಿಲ್ಲ ಭವಿಷ್ಯ ರೂಪಿಸುತ್ತೇನೆ. ಅದು ಆಳುವವರಿಗೆ ಸೇರಿದ ವಿಷಯ. ಇಲ್ಲಿವರೆಗೆ ಹೇಳಿದ ಭವಿಷ್ಯವೆಲ್ಲ ಆಗೆ ಬಿಡ್ತವೆ. ಆಗಬಾರದು ಅಂತಹೇಳ್ತಿನಿ ನಾನು. ಕೊರೊನಾ ಬಗ್ಗೆ ಮೊದಲೇ ಹೇಳಿದ್ದೆ ರೋಗ ಬರುತ್ತೆ ಜನ ಸಾಯ್ತಾರೆ ಅಂತ. ಮದ್ದಿಲ್ಲದ ವ್ಯಾದಿ ಬರುತ್ತದೆ ಎಚ್ಚೆತ್ತುಕೊಳ್ಳಬೇಕು ಅಂದೆ. ಎಷ್ಟು ಜನರ ಸತ್ರು ಅಲ್ವೆ? ಈಗಲೂ ಹೇಳ್ತಿನಿ ಅಂತ ಒಂದು ರೋಗ ಬರುವ ಚಾನ್ಸ್ ಇದೆ. ಐದು ವರ್ಷ ಕಾಡುತ್ತದೆ. ಅವರು ಹುಷಾರಾದರೆ ಹೋಗಬಹುದು ಎಂದು ಸರ್ಕಾರಗಳಿಗೆ ಎಚ್ಚರಿಕೆ ವಹಿಸುವಂತೆ ಕಿವಿಮಾತು ಹೇಳಿದರು.
ಎರಡು ಒಂದು ಯುಗಾದಿ ಭವಿಷ್ಯ,ಇನ್ನೊಂದು ಸಂಕ್ರಾಂತಿ ಭವಿಷ್ಯ. ಯುಗಾ ಭವಿಷ್ಯ ಪ್ರಕೃತಿಗೆ ಸಂಬಂಧಿಸಿದ್ದು. ಸಂಕ್ರಾಂತಿ ಭವಿಷ್ಯ ರಾಜರಿಗೆ, ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಹಡಗಿನಲ್ಲಿ ಬರುವಂತವರಿಗೆ ಬರುತ್ತದೆ. ಸಂಕ್ರಾಂತಿವರೆಗೆ ಬದಲಾವಣೆ ದೋಷ ಕಾಡುತ್ತಿಲ್ಲ. ಇಲ್ಲಿವರೆಗೂ ರಾಜನ ಬದಲಾವಣೆ ಆಗುವ ಯಾವುದೇ ಸಾಧ್ಯತೆ ಇಲ್ಲ. ಸಂಗಮೇಶ ನಲಿವನೆ, ಆದರೆ ಒಳಅಡ್ಡ ಬಂದಿದೆ ಬದಲಾವಣೆ ವಿಚಾರದಲ್ಲಿ. ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು. ಆ ಶಕ್ತಿ ಇದ್ರೆ. ಈ ಹಿಂದೆಯೇ ಹೇಳಿದ್ದೆ ಹಾಲುಮತದವರಿಗೆ ಅಧಿಕಾರಬಂದರೆ ಬಿಡಿಸಿಕೊಳ್ಳೋದು ಕಷ್ಟ ಅವರಾಗಿಯೇ ಬಿಡಬೇಕು.
ಯಾಕೆಂದರೆ ವಿಜಯನಗರ ಸಾಮ್ರಾಜ್ಯ ಹಕ್ಕಬುಕ್ಕರು ಕಟ್ಟಿದ್ದು. ಇವತ್ತು ಅದೇ ಚಿಹ್ನೆ ಇರೋದುಮೈಸೂರು ದಸರಾ ಅದೇ ಚಿಹ್ನೆಯಲ್ಲಿನಡೆಯುತ್ತಿರುವುದು. ಹಾಲು ಕೆಟ್ಟರು ಹಾಲುಮತಕೆಡುವುದಿಲ್ಲ. ಅಂತವರಕೈಲಿ ಅಧಿಕಾರ ಸಿಕ್ಕಿರುವುದರಿಂದ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದು ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳು ಸ್ಫೋಟಕ ಭವಿಷ್ಯ ನುಡಿದರು.