ಇಬ್ಬರು ಅಪರಿಚಿತ ಪುರುಷರ ಸಾವು

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಪ್ರತ್ಯೇಕ ಘಟನೆಗಳಲ್ಲಿ, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇಬ್ಬರು ಪುರುಷರು, ಚಿಕಿತ್ಸೆ ಫಲಕಾರಿಯಾಗದೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಪುರುಷರ ಹೆಸರು, ವಿಳಾಸ ಸೇರಿದಂತೆ ಯಾವುದೇ ಪೂರ್ವಾಪರಗಳ ಮಾಹಿತಿ ಲಭ್ಯವಾಗಿಲ್ಲ ಎಂದು ಸೆ. 21 ರಂದು ಶನಿವಾರ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಮೃತ ವ್ಯಕ್ತಿಗಳ ವಿವರ ಈ ಮುಂದಿನಂತಿದೆ.

ಟೈಲರ್ ಅಂಗಡಿ ಹೆಸರಿದೆ : ತಾವರೆಕೊಪ್ಪ ಹುಲಿ-ಸಿಂಹಧಾಮ ದ ಹತ್ತಿರ ಸೆ.07 ರಂದು ಸುಮಾರು 50-55 ವರ್ಷ ವಯಸ್ಸಿನ ಪುರುಷ ಅನಾರೋಗ್ಯದಿಂದ ಮಲಗಿದ್ದು, ಚಿಕಿತ್ಸೆಗೆಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂದು ದೃಢಪಡಿಸಿರುತ್ತಾರೆ.  

ಮೃತ ವ್ಯಕ್ತಿಯು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ ಹೊಂದಿದು, ಎಡಗಾಲಿನ ಹೆಬ್ಬೆರಳು ಮತ್ತು ಮಧ್ಯದ ಬೆರಳು ಇರುವುದಿಲ್ಲ.

ಮೈಮೇಲೆ ಮಹೇಂದ್ರಕರ್ ಟೈಲರ್-ನ್ಯೂಮಂಡ್ಲಿ, ಶಿವಮೊಗ್ಗ ಎಂದು ನಮೂದಿಸಿರುವ ಬಿಳಿಪಿಂಕ್ ಕಲರ್ ಗೆರೆಯಿರುವ ತುಂಬು ತೋಳಿನ ಶರ್ಟ್, ಪಾಚಿ ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ. 

ಹಿಂದಿ ಮಾತನಾಡುತ್ತಿದ್ದರು :
ಇನ್ನೊಂದು ಪ್ರಕರಣದಲ್ಲಿ ಆ. 14 ರಂದು ಗೋವಿಂದಪುರದ ಹಾಯ್ಹೊಳೆ ರಸ್ತೆ ಬದಿಯಲ್ಲಿ ಸುಸ್ತಾಗಿ ಮಲಗಿದ್ದ ಸುಮಾರು 65 ವರ್ಷದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಇವರು ಹಿಂದಿ ಭಾಷೆ ಮಾತಾನಾಡುತ್ತಿದ್ದರು

ಮೃತರು 05.5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮೈಮೇಲೆ ನೀಲಿ ಮತ್ತು ತಿಳಿ ಕೆಂಪು ಬಣ್ಣದ ತುಂಬು ತೋಳಿದ ಶರ್ಟ್, ಪಾಚಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಮೃತ ವ್ಯಕ್ತಿಗಳ ವಾರಸ್ಸುದಾರರು ಪತ್ತೆಯಾದಲ್ಲಿ ತುಂಗಾನಗರ ಪೊಲೀಸ್ ಠಾಣೆ , ದೂ.ಸಂ.: 08182-261400 / 9480803370/ 9480803377 /9141289308 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

 

- Advertisement -  - Advertisement - 
Share This Article
error: Content is protected !!
";