ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರಕಾರ ತನ್ನ ಭ್ರಷ್ಟಾಚಾರ, ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರ ದಿಕ್ಕು ತಪ್ಪಿಸಲು ದಿನಕ್ಕೊಂದು ಷಡ್ಯಂತ್ರ ರೂಪಿಸುತ್ತಿದೆ. ಅದರ ಹುನ್ನಾರವೇ ಆಪರೇಷನ್ ಧರ್ಮಸ್ಥಳ! ಧರ್ಮ ಸರಕಾರಕ್ಕೆ ತಿರುಗಿಸಿ ತಿರುಗೇಟು ಕೊಟ್ಟಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದೆ. ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಕಾಂಗ್ರೆಸ್ ಟೂಲ್ ಕಿಟ್ ರಾಜಕಾರಣ ಇದೇ ಹೊಸತಲ್ಲ.
ಎಲ್ಲಿಂದಲೋ ಅನಾಮಿಕ ವ್ಯಕ್ತಿಯನ್ನು ಕರೆತಂದು, ಬರುಡೆ ಕಥೆ ಕಟ್ಟುತ್ತಾರೆ. ಇದನ್ನು ನಂಬುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವಾಪರ , ಸತ್ಯಾಸತ್ಯತೆ ಅರಿಯದೇ ರಾತ್ರೋರಾತ್ರಿ ಎಸ್‌ಐಟಿ ತನಿಖೆಗೆ ಆದೇಶ ಮಾಡುತ್ತಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಿದ್ದರಾಮಯ್ಯ ಯಾರದೋ ಒತ್ತಡಕ್ಕೆ ಮಣಿದು ಎಸ್‌ಐಟಿ ರಚಿಸಿದ್ದನ್ನು ಅವರದೇ ಸಚಿವರು, ಶಾಸಕರು, ನಾಯಕರು ವಿರೋಧ ವ್ಯಕ್ತಪಡಿಸುತ್ತಾರೆ.
ಒಂದೆಡೆ ತೊಟ್ಟಿಲು ತೂಗುವುದು ಇವರೇ, ಮತ್ತೊಂದ್ಕಡೆ ಮಗುವನ್ನು ಚಿವುಟುವುದು ಇವರೇ. ಸತ್ಯ ಆಚೆಗೆ ಬಂದಿದೆ. ಧರ್ಮಸ್ಥಳ ಧರ್ಮ ತಪ್ಪಿಲ್ಲ. ಸರಕಾರ ಮಾತ್ರ ದಾರಿ ತಪ್ಪಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

