ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ : ಹೊರೆಕೇರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯ ರೈತ ಸಂಘದ ಮಾಸಿಕ ಸಭೆ ಹಿರಿಯೂರು ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷ ಬಿ ಓ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗಿಯ ಉಪಾಧ್ಯಕ್ಷ ಕೆ ಸಿ ಹೊರಕೇರಪ್ಪ ಮಾತನಾಡಿ, ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು ಬಿತ್ತನೆ ಪ್ರಮಾಣವು ಸಹ ಕಡಿಮೆ ಆಗಿದೆ. ರೈತರು ಅಲ್ಪಸ್ವಲ್ಪ ಪ್ರಮಾಣದಲ್ಲಿ ಈರುಳ್ಳಿಬೆಳೆ ಬಿತ್ತನೆ ಮಾಡಿದ್ದು ಈರುಳ್ಳಿ ಬೆಳೆಗೆ ಕೊಳೆರೋಗ, ಸುಳಿ ರೋಗ ಬಾಧೆಯಿಂದ ರೋಗ ಹತೋಟಿಗೆ ಬಾರದೆ ಬೆಳೆ ನಾಶವಾಗಿದೆ.

- Advertisement - 

ಅಲ್ಪ ಸ್ವಲ್ಪ ಪ್ರಮಾಣದಲ್ಲಿ ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿರುತ್ತಾರೆ.  ಟೊಮ್ಯಾಟೊ ಬೆಳೆ ಸಹ ಬೆಲೆ ಕುಸಿತದಿಂದ ರೈತರು ರಸ್ತೆಗೆ ಸುರಿಯುವಂತಾಗಿದ್ದು ಮತ್ತು ಇತರೆ ಅಲ್ಪಾವಧಿ ಬೆಳೆಗಳಾದ ಹತ್ತಿ, ರಾಗಿಮುಸುಕಿನ ಜೋಳ, ಶೇಂಗಾ, ಸೂರ್ಯಕಾಂತಿ ಇತರೆ ಸಿರಿಧಾನ್ಯಗಳ ಬೆಳೆ ಸಹ ರೈತರ ಕೈ ಸೇರದೆ ಬೆಳೆ ನಷ್ಟದಿಂದ ರೈತ ಸಾಲಗಾರನಾಗಿ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದ್ದು ಸರ್ಕಾರ ಕೂಡಲೇ ಜಿಲ್ಲೆಯ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಬಿ ಓ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಂ ಆರ್ ಪುಟ್ಟಸ್ವಾಮಿ, ಬಿ ಡಿ ಶ್ರೀನಿವಾಸ್, ಮೇಟಿಕುರ್ಕೆ ತಿಪ್ಪೇಸ್ವಾಮಿ, ದೇವರಕೊಟ್ಟ ರಂಗಸ್ವಾಮಿ, ಮರದ ಮುತ್ತು, ಮುನಿಸ್ವಾಮಿ, ಸತ್ಯನಾರಾಯಣ, ಅಂಜನಪ್ಪ, ರುದ್ರಪ್ಪ, ಮಲ್ಲೇಣು ನಾಗರಾಜು, ಈಶ್ವರಗೆರೆ ನಾಗರಾಜು, ಕೂಡ್ಲಹಳ್ಳಿ ತಿಪ್ಪೇಸ್ವಾಮಿ, ಅನುಸೂಯಮ್ಮ, ಲೋಕೇಶ್, ವೀರಭದ್ರಪ್ಪ, ವಿ ವಿ ಪುರ ಮಂಜಣ್ಣ ಸಭೆಯಲ್ಲಿ ಇದ್ದರು.

- Advertisement - 

 

 

Share This Article
error: Content is protected !!
";