ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ವಕ್ಫ್ ಇನ್ನಷ್ಟು ವಿಸ್ತಾರವಾಗಿ ತನ್ನ ಕಬಂಧಬಾಹುಗಳನ್ನು ಚಾಚಿ ಐತಿಹಾಸಿಕ, ಪಾರಂಪರಿಕ ಕಟ್ಟಡಗಳನ್ನು ಸ್ವಾಹ ಮಾಡುತ್ತಿರುವುದನ್ನು ನೋಡಿದರೆ, ಇತಿಹಾಸ ಪುರಾಣ ಪ್ರಸಿದ್ಧ ದೇವಾಲಯಗಳು, ಮಠಮಾನ್ಯಗಳನ್ನೂ ನುಂಗಿ ನೀರು ಕುಡಿಯುವಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹರಿಹಾಯ್ದಿದ್ದಾರೆ.
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಹೇಳಿದಂತೆ ದೇವಾಲಯ, ಮಠ, ಐತಿಹಾಸಿಕ ಸ್ಮಾರಕಗಳ ಮೇಲೆ ಹಸಿರು ದ್ವಜ ನೆಡುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ತುರ್ತು ಇದೆ ಎಂದು ರವಿ ಎಚ್ಚರಿಸಿದ್ದಾರೆ.
ಇತಿಹಾಸ ಪ್ರಸಿದ್ದ ಶ್ರೀ ರಂಗಪಟ್ಟಣದ 65ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ವಕ್ಫ್ ಆಸ್ತಿಯನ್ನಾಗಿ ಪರಿಗಣಿಸಲಾಗಿದೆ, ಹೀಗೆ ಬಿಟ್ಟರೆ ಮುಂದೊಂದು ದಿನ ಈ ಕಾಂಗ್ರೆಸ್ ಸರ್ಕಾರ ಇಡೀ ಮೈಸೂರು ಸಂಸ್ಥಾನವನ್ನು “ಮುಲ್ಲಾನ ಸಾಮ್ರಾಜ್ಯ”ಎಂದು ಘೋಷಿಸುವುದಕ್ಕೂ ಹೇಸುವುದಿಲ್ಲ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.