ಚಂದ್ರವಳ್ಳಿ ನ್ಯೂಸ್, ಚಡಚಣ:
12 ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರಿಗೆ ತಮ್ಮ ತೊಡೆ ಚರ್ಮದಿಂದ ಪಾದುಕೆ ತಯಾರಿಸಿಕೊಟ್ಟ ಮಹಾಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿಗಳ ನೂತನ ಮೂರ್ತಿ ಉದ್ಘಾಟನಾ ಸಮಾರಂಭ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಶೇಗುಣಸಿಯಲ್ಲಿರುವ ಹರಳಯ್ಯನವರ ಗುಂಡದ ಆವರಣದಲ್ಲಿ ಡಿ. 27 ರಂದು ಶನಿವಾರ ಬೆಳಿಗ್ಗೆ 10-00 ಗಂಟೆಗೆ ನೆರವೇರಲಿದೆ.
ವಿವಿಧ ಮಠ-ಮಾನ್ಯಗಳ ಮಠಾಧೀಶರು, ರಾಜಕೀಯ ಗಣ್ಯರು, ಮುಖಂಡರು ಹಾಗೂ ಸಮಾಜದ ಸಾವಿರಾರು ಬಾಂಧವರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚಡಚಣ ಪಟ್ಟಣ ಹಾಗೂ ತಾಲ್ಲೂಕಿನ ಪ್ರತಿ ಗ್ರಾಮದ ಹರಳಯ್ಯ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಚಡಚಣ ತಾಲೂಕು ಕೆ.ಡಿ.ಪಿ ಸಮಿತಿ ಸದಸ್ಯರು ಹಾಗೂ ಸಮಾಜದ ಮುಖಂಡರಾದ ಸೈದು ಕೊಡಹೊನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

