ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಭಾರತೀ ತೀರ್ಥ ಮಹಾಸ್ವಾಮಿಗಳವರ 50ನೇ ವರ್ಷದ ಸನ್ಯಾಸ ಸ್ವೀಕಾರ ಮಹೋತ್ಸವದ ಅಂಗವಾಗಿ ಕಲ್ಯಾಣವೃಷ್ಠಿ ಮಹಾಭಿಯಾನ–ಸ್ತೋತ್ರ ಸಮರ್ಪಣೆ ನಡೆಯಿತು.
ಶಾಂಕರ ತತ್ವ ಪ್ರಸಾರ ಅಭಿಯಾನದ ವತಿಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹ ಅನೇಕರು ಸ್ತೋತ್ರಗಳನ್ನು ಅಭ್ಯಾಸ ಮಾಡಿದ್ದು, ಶುಕ್ರವಾರ ಸಾಮೂಹಿಕವಾಗಿ ಸ್ತೋತ್ರ ಸಮರ್ಪಿಸಿದರು.
ಬೆಲಗೂರು ಕ್ಷೇತ್ರದ ಮಾರುತಿ ಶರ್ಮರು ಸಾನಿಧ್ಯವಹಿಸಿ, ಅವರ ಸಮ್ಮುಖದಲ್ಲಿ ಸಾವಿರಾರು ಮಾತೆಯರು ಸ್ತೋತ್ರಗಳನ್ನು ಪಠಿಸಿದರು. ಶೃಂಗೇರಿ ಶಾರದ ಪೀಠದ ಪ್ರತಿನಿಧಿಯಾಗಿ ಉಮೇಶ್ ಹರಿಹರ ಅವರು ಭಾಗವಹಿಸಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಅಧ್ಯಕೀಯ ಮಾತುಗಳನ್ನಾಡಿದರು. ಮಾರುತಿ ಪ್ರಸಾದ್ ಅವರು ನಿರೂಪಣೆ ಮಾಡಿದರು.
ಭಾರತೀ ತೀರ್ಥ ಮಹಾಸ್ವಾಮಿಗಳವರ 50ನೇ ವರ್ಷದ ಸನ್ಯಾಸ ಸ್ವೀಕಾರ ಮಹೋತ್ಸವದ ಅಂಗವಾಗಿ ಅನೇಕ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಲೋಕ ಕಲ್ಯಾಣಕ್ಕೋಸ್ಕರ ನಡೆದಿವೆ. ಇಂತಹ ಕಾರ್ಯಕ್ರಮಗಳಲ್ಲಿ ಶಾಂಕರ ಸ್ತೋತ್ರ ಪಠಣವೂ ವಿಶೇಷವಾಗಿದೆ.
ಶಂಕರಚಾರ್ಯರು ರಚಿಸಿದ ಕಲ್ಯಾಣವೃಷ್ಠಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ, ಲಷ್ಮೀ ನೃಸಿಂಹ ಕರಾವಲಂಬ ಸ್ತೋತ್ರಗಳ ಅಭಿಯಾನ ರಾಜ್ಯಾದ್ಯಂತ ನಡೆಯುತ್ತಿದೆ. ಸಾವಿರಾರು ಕೇಂದ್ರಗಳಲ್ಲಿ ಲಕ್ಷಾಂತರ ಮಾತೆಯರು ಮೂರು ಸ್ತೋತ್ರಗಳನ್ನು ಸಮರ್ಪಣೆ ಮಾಡುತ್ತಿದ್ದಾರೆ ಎಂದು ಶಾಂಕರ ತತ್ತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕಿ ಉಷಾ ಗುರುದತ್ತ ತಿಳಿಸಿದರು.