ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ಸಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೇರವೇರಿತು.
ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಮಹಾ ಸ್ವಾಮೀಜಿ, ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿ ಇವರುಗಳು ಜ್ಞಾನ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆಯನ್ನು ನೆರೆವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಜಯರಾಮಯ್ಯ ಭೇಟಿ ನೀಡಿದ್ದರು. ಕೃಷ್ಣ ಕುಮಾರಿ, ಸಂಗೀತ ವಿದ್ವಾನ್ ತ್ರಿವೇಣಿ ಮತ್ತು ಸಂಗಡಿಗರಿಂದ ಭಜನೆ, ಗೀತೆಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಳೆದ ಮೂರು ದಿನಗಳಿಂದ ದೇವಸ್ಥಾನಕ್ಕೆ ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಅನ್ನದಾಸೋಹ ನಡೆಯಿತು.
ಶ್ರೀ ಪಂಚಮುಖಿ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಡಿ.ನಾರಾಯಣ ರೆಡ್ಡಿ, ಉದ್ಯಮಿ ಹಾಗೂ ದೇವಸ್ಥಾನ ಸಮಿತಿಯ ಅಧ್ಯಕ್ಷ ಬೀರೇನಹಳ್ಳಿ ಬಸಂತ್ ಕುಮಾರ್,
ಉಪಾಧ್ಯಕ್ಷರಾದ ನಿರಂಜನ ಮೂರ್ತಿ, ಪಿ.ಕೆ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಂ ದಿವಾಕರ, ಖಜಾಂಚಿ ಪ್ರಹ್ಲಾದ, ಸಹ ಕಾರ್ಯದರ್ಶಿ ನಿರಂಜನ ಶೀಲವಂತರ್, ಸಂಘಟನಾ ಕಾರ್ಯದರ್ಶಿ ಪಿ ಹೆಚ್ ನಾಗರಾಜಪ್ಪ, ಸದಸ್ಯರಾದ ಮಹಾಂತೇಶ್, ಸಿಂಗಾರಿ, ಟಿ.ಎಸ್ ಶಿವಪ್ರಸಾದ್,
ಶ್ರೀಧರ ಎಂಜಿ, ಓಂಕೇಶ್, ತುಳಸಿ ಶಿವಣ್ಣ, ವೆಂಕಟೇಶ ರೆಡ್ಡಿ, ರಾಘವೇಂದ್ರ, ಕಾರ್ತಿಕ್, ಅಂಬಿಕಾ, ಓಂಕಾರೇಶ್ವರ್, ರಮೇಶ್, ಲಲಿತ ಮಲ್ಲೇಶ್, ರವಿಚಂದ್ರ ಗೌಡ, ಕೃಷ್ಣ ಕಣ್ಣಯ್ಯ ಹಾಗೂ ನೂರಾರು ಜನ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

