ಭದ್ರಾ ಜಲಾಶಯಕ್ಕೆಇಂದು ಬಯಲು ಸೀಮೆ ಬಾಗಿನ  ಸಮರ್ಪಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ  ನೀರಾವರಿ ಅನುಷ್ಟಾನ ಹೋರಾಟ ಸಮಿತಿ ವತಿಯಿಂದ ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಬಯಲು ಸೀಮೆ ಬಾಗಿನ ಸಮರ್ಪಣೆ ಮಾಡುವ ಕಾರ್ಯವನ್ನು ಆಗಸ್ಟ್-3ರ ಭಾನುವಾರ ಹಮ್ಮಿಕೊಳ್ಳಲಾಗಿದೆ.

 ಎಂದಿನಂತೆ ಈ ಬಾರಿಯೂ ಬಾಗಿನವನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆಯುವ 30 ಕ್ಕೂ ಹೆಚ್ಚು ಧಾನ್ಯಗಳನ್ನುತೊಟ್ಟಿಲು ಆಕಾರದ ಮೊರದಲ್ಲಿ ಇಟ್ಟು ಜಲಾಶಯದಲ್ಲಿನ ಜಲಚರಕ್ಕೆ ಅರ್ಪಿಸಲಾಗುತ್ತಿದೆ.

- Advertisement - 

ರಾಗಿ, ಜೋಳ, ಸೂರ್ಯಕಾಂತಿ, ಮೆಕ್ಕೇಜೋಳ, ಕುರಸಾನಿ, ಕುಸುಬೆ,  ಹಲಸಂದಿ, ತೊಗರಿ, ಎಳ್ಳು, ಹೆಸರುಕಾಲು, ಸಾಸಿವೆ, ಸಿರಿದಾನ್ಯ ಸೇರಿದಂತೆ ದಾಳಿಂಬೆ, ಮೋಸುಂಬಿ, ಬಾಳೆಹಣ್ಣು, ಮುಂತಾದ ಹಣ್ಣು ಹಂಪಲು, ಪ್ರಮುಖ ತರಕಾರಿಯ ತೊಟ್ಟಿಲಲ್ಲಿ ತುಂಬಿ ಜಲಾಶಯಕ್ಕೆ ಸಮರ್ಪಣೆ ಮಾಡಲಾಗುವುದು. 

 ಈ ಬಾರಿ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ನೀರು ಬರುವ ಹಿನ್ನಲೆಯಲ್ಲಿ ವಿಶೇಷವಾಗಿ ಹೊಳಲ್ಕೆರೆ ತಾಲೂಕಿನ ರೈತರನ್ನುಹೆಚ್ಚಿನ ಪ್ರಮಾಣದಲ್ಲಿ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಕರೆದೊಯ್ಯಲಾಗುತ್ತಿದೆ. ಒಂದು ನೂರಕ್ಕೂ ಹೆಚ್ಚು ಕಾರುಗಳಲ್ಲಿ ಜನತೆ ತೆರಳುವರು. ಶಾಸಕ ಎಂ.ಚಂದ್ರಪ್ಪ ಜವಾಬ್ದಾರಿ ಹೊತ್ತಿದ್ದಾರೆ. 

- Advertisement - 

ಅಬ್ಬಿನಹೊಳಲು,  ಅಜ್ಜಂಪುರ ಸಮೀಪದ ಸುರಂಗ ಮಾರ್ಗ, ಬೆಟ್ಟದಾವರೆಕೆರೆ  ಲಿಫ್ಟ್ , ಶಾಂತಿಪುರ ಲಿಪ್ಟ್ ವೀಕ್ಷಣೆ ಮಾಡಿಕೊಂಡು ಅಂತಿಮವಾಗಿ ಲಕ್ಕವಳ್ಳಿ  ಭದ್ರಾ ಜಲಾಶಯಕ್ಕೆ ತೆರಳಿ ಬಾಗಿನ ಸಮರ್ಪಣೆ ಮಾಡಲಾಗುವುದು ಎಂದು ನೀರಾವರಿ ಅನುಷ್ಠಾನ  ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.

 

 

 

Share This Article
error: Content is protected !!
";