ಸಂಸದ ಕಾರಜೋಳಗೆ ಧಿಕ್ಕಾರ, ಇಂದಿನಿಂದ ಉಪವಾಸ ಸತ್ಯಾಗ್ರಹ-ಕೆ.ಟಿ ರುದ್ರಮುನಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ಎರೆನಾಡು ರೈತ ಸಂಘ ಮತ್ತು ಐಮಂಗಲ ಭದ್ರ ಮೇಲ್ಲಾಂಡೆ ನೀರಾವರಿ ಹೋರಾಟ ಸಮಿತಿ
ಐಮಂಗಲ, ಹಿರಿಯೂರು ತಾಲ್ಲೂಕು ಚಿತ್ರದುರ್ಗ ಬುಧವಾರ ನಡೆಯುವ ಚಿತ್ರದುರ್ಗ ಜಿಲ್ಲೆಯಲ್ಲಿ ರೈತ ಮತ್ತು ಹಸಿರು ಸೇನೆ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ನೇತೃತ್ವದ ಈ ಉಪವಾಸ ಸತ್ಯಗ್ರಹ ಹಾಗೂ ಹೋರಾಟಕ್ಕೆ ಕರ್ನಾಟಕ ಎರೆನಾಡು ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ.ಟಿ. ರುದ್ರಮುನಿಯವರು ತಮ್ಮ ಸಂಪೂರ್ಣ ಬೆಂಬಲ ಘೋಷಿಸಿ ತಾವು ಕೂಡ ಇದರಲ್ಲಿ ಭಾಗವಹಿಸುವುದಾಗಿ ತಿಳಿಸಿರುತ್ತಾರೆ.

ಅದರಲ್ಲೂ ಬಹುಮುಖ್ಯವಾಗಿ ಭದ್ರಾ ಮೇಲ್ದಂಡೆ ವಿಚಾರ, ಐಮಂಗಲ ಮತ್ತು ಜವಗೊಂಡನಹಳ್ಳಿ ಹೋಬಳಿಗಳ ಕೆರೆಗಳಿಗೆ ನೀರು ಬಿಡುಗಡೆಗೆ ಪ್ರಪ್ರಥಮ ಆಧ್ಯತೆಯಾಗಿರಬೇಕು.

- Advertisement - 

 ಈ ಹೋರಾಟ ಉಗ್ರ ರೂಪಕ್ಕೆ ತೆಗೆದುಕೊಂಡು ಹೋದರೆ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ಘಂಟೆಯಗುತ್ತದೆ. ಈ ಹಿನ್ನಲೆಯಲ್ಲಿ ಪಕ್ಷಾತೀತವಾಗಿ ಮುಂದುವರಿದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ಹೇಳಿದ ಇವರು 5300 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಸುವಲ್ಲಿ ವಿಫಲವಾಗಿರುವ ಸಂಸತ್ ಸದಸ್ಯರಾದ ಗೋವಿಂದ ಎಂ ಕಾರಜೋಳ ರವರಿಗೆ ನಮ್ಮೆಲ್ಲರ ಧಿಕ್ಕಾರವಿರಲಿ, ಅಂತೆಯೇ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ನಡೆಯೇನು ಇದನ್ನು ಸಹ ಬಿಚ್ಚಿಡಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ರೈತ ಸಂಘಟನೆಗಳು ಒಂದಾಗಿ ಪ್ರಗತಿ ಪರ ಸಂಘಟನೆಗಳೊಂದಿಗೆ ಕೈ ಜೋಡಿಸಿ ಹೋರಾಟಕ್ಕೆ ಇಳಿಯಬೇಕೆಂದು ಶ್ರೀ ಕೆ.ಟಿ.ರುದ್ರಮುನಿ ಯವರು ಮತ್ತು ಎನ್. ತಿಪ್ಪಿರಯ್ಯ ನವರು ಎಲ್ಲರಲ್ಲೂ ವಿನಮ್ರ ವಿನಂತಿ ಮಾಡಿದ್ದಾರೆ. ಅಲ್ಲಿಯವರೆಗೂ ನಮ್ಮಲ್ಲರ ಸ್ವಪ್ರತಿಷ್ಟೆಗಳನ್ನು ಬದಿಗೆ ಸರಿಸೋಣ ಎಂದು ಎರೆನಾಡು ರೈತ ಸಂಘದ ಅಧ್ಯಕ್ಷ ಕೆ.ಟಿ ರುದ್ರಮಿನಿ, ಮಾಜಿ ತಾಪಂ ಅಧ್ಯಕ್ಷ ಎನ್.ತಿಪ್ಪೀರಯ್ಯ ಆಗ್ರಹಿಸಿದ್ದಾರೆ.

- Advertisement - 

 

Share This Article
error: Content is protected !!
";