ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ದಸರಾ ಎಷ್ಟೊಂದು ಸುಂದರ ಚೆಲ್ಲಿದೆ ನಗೆಯಾ ಪನ್ನೀರಾ ಎಂಬುವಂತೆ ಇಂತಹ ದಸರಾ ಹಬ್ಬವನ್ನು ನೋಡಿ ಕಣ್ತುಂಬಿಕೊಳ್ಳುವುದೇ ಒಂದು ದೊಡ್ಡ ಅದೃಷ್ಟ. ಅದರಲ್ಲೂ ಅಂತಹ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಅವಕಾಶ ಸಿಕ್ಕಿತೆಂದರೆ ಅದೊಂದು ದೊಡ್ಡ ಸಾಹಸವೇ ಸರಿ ಅಲ್ಲವೇ.
ಇಂತಹ ಈ ಐತಿಹಾಸಿಕ ದಸರಾ ವೈಭವದ ಕಾರ್ಯಕ್ರಮದಲ್ಲಿ ಅರಮನೆಯ ಮುಖ್ಯ ವೇದಿಕೆಯಲ್ಲಿ ದಿನಾಂಕ 29/09/2025 ರಂದು ನೃತ್ಯ ರೂಪಕವನ್ನು ಪ್ರಸ್ತುತಪಡಿಸುವ ಸೌಭಾಗ್ಯ ದೆಹಲಿ ಕರ್ನಾಟಕ ಸಂಘದ ಮಕ್ಕಳಿಗೆ ಸಿಕ್ಕಿದ್ದು ಮತ್ತು ಸಿಕ್ಕಂತಹ ಅವಕಾಶವನ್ನು ಮಕ್ಕಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಭೂತಪೂರ್ವ ಯಶಸ್ಸನ್ನು ಸಾಧಿಸಿ ಜನಮನ ಗೆದ್ದಿದ್ದಾರೆ.
ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ಮತ್ತು ದೂರದರ್ಶನದ ಮೂಲಕ ಈ ಕಾರ್ಯಕ್ರಮ ವೀಕ್ಷಿಸಿದ ಎಲ್ಲರೂ ತಲೆದೂಗುವಂತೆ ಕನ್ನಡದ ಹಾಡುಗಳಿಗೆ ಜೀವ ತುಂಬಿದಂತೆ ದೆಹಲಿಯ ಕನ್ನಡ ಮಕ್ಕಳು ನರ್ತಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಇಂತಹ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳು ಭಾಗಿಯಾಗಿ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದ್ದನ್ನು ನೋಡಿ ಮತ್ತು ತಮ್ಮ ಮಕ್ಕಳಿಗೆ ಅಂತಹ ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡಿ ಅವರನ್ನು ಸುರಕ್ಷತೆಯಿಂದ ಕರೆದುಕೊಂಡು ಹೋಗಿ ಕ್ಷೇಮವಾಗಿ ನೋಡಿಕೊಂಡು ಸುರಕ್ಷಿತವಾಗಿ ಜವಾಬ್ದಾರಿಯಿಂದ ಮರಳಿ ಕರೆದುಕೊಂಡು ಬಂದು ಮೈಸೂರಲ್ಲಿ ಮಕ್ಕಳಿಗೆ ವಿವಿಧೋಪಚಾರ ಮಾಡಿಸಿದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರನ್ನು ಮಕ್ಕಳ ಪೋಷಕರು ತುಂಬು ಹೃದಯದಿಂದ ಮೆಚ್ಚುಗೆ(ಹೊಗಳಿ) ವ್ಯಕ್ತಪಡಿಸಿ ಹಾರೈಸಿದ್ದಾರೆ.
ಹೌದು ಇಂತಹ ಒಂದು ಐತಿಹಾಸಿಕ ವೈಭವದ ಕಾರ್ಯಕ್ರಮದಲ್ಲಿ ದೆಹಲಿ ಕನ್ನಡದ ಮಕ್ಕಳು ಅಂತಹ ವೇದಿಕೆಯಲ್ಲಿ ನೃತ್ಯ ಮಾಡುವ ಅವಕಾಶ ಪಡೆಯಲು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ತುಂಬಾ ಶ್ರಮ ಪಟ್ಟಿದ್ದಾರೆ. ಇಂತಹ ವೇದಿಕೆಯಲ್ಲಿ ಅವಕಾಶ ಪಡೆಯುವ ಮೂಲಕ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ.

ನಿಜವಾಗಲೂ ಇದು ಒಂದು ಅವರ ದೊಡ್ಡ ಗೆಲುವೇ ಸರಿ. ಏಕೆಂದರೆ ಇದುವರೆಗೂ ಆಗಲಾಗದ್ದನ್ನು ಇವರ ಆಡಳಿತಾವಧಿಯಲ್ಲಿ ಇಂತಹ ಹತ್ತಾರು ಸಾಹಸಗಳನ್ನು ಮಾಡಿ ತೋರಿಸಿದ್ದಾರೆ.
ಮತ್ತು ಒಬ್ಬ ಅಧ್ಯಕ್ಷ ಏನೆಲ್ಲ ಸಾಧನೆ ಮಾಡಬಹುದು ಎಂಬುವುದಕ್ಕೆ ಇವರು ಉತ್ತಮ ನಿದರ್ಶನ. ಅದರಲ್ಲೂ ಇವರಿಗೆ ಇವರೇ ಸಾಟಿ. ಏಕೆಂದರೆ ಈಗಾಗಲೇ ಅವರು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಆ ಕಾರ್ಯಕ್ರಮದಲ್ಲಿ ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸಿ ಸುಮಾರು 45 ನಿಮಿಷಗಳ ಸುದೀರ್ಘ ಕಾಲದ ಅವರ ಭಾಷಣದಲ್ಲಿ ಕನ್ನಡದ ನುಡಿಗಳನ್ನು ಬಳಸುವಂತಹ ಹಾಗೂ ದೆಹಲಿ ಕರ್ನಾಟಕ ಸಂಘವನ್ನು ಮೆಚ್ಚಿ ಹೊಗಳಿ ಕೊಂಡಾಡುವಂತಹ ವಾತಾವರಣವನ್ನು ಅಧ್ಯಕ್ಷರು ಕಟ್ಟಿಕೊಟ್ಟಿದ್ದಾರೆ. ಮತ್ತು ಇಂತಹ ಹಲವು ಅದ್ಭುತಗಳಿಗೆ ಸಾಕ್ಷಿಯಾಗಿದ್ದಾರೆ.
ಈ ಬಾರಿಯ ಮೈಸೂರು ದಸರಾ ವೇದಿಕೆಯಲ್ಲಿ ದೆಹಲಿಯ ಸುಮಾರು ಹತ್ತಾರು ಕನ್ನಡ ಮಕ್ಕಳು ಸೇರಿದಂತೆ ನೃತ್ಯ ಸಂಯೋಜಕಿ ಲಿಖಿತಾ ಕೊಪ್ಪದ್ ಅವರು ಸಹ ಮಕ್ಕಳ ಜೊತೆ ಭವ್ಯ ನರ್ತನ ಮಾಡಿದರು. ಅಲ್ಲದೆ ಅವರು ಕಡಿಮೆ ಅವಧಿಯಲ್ಲಿಯೇ ಮಕ್ಕಳಿಗೆ ನೃತ್ಯ ಸಂಯೋಜಿಸಿ ತಮ್ಮ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್ ಅವರು ಈ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಸಂಚಾಲಕರಾಗಿ ನೇಮಿಸಿದ ಅರುಣ್ ಸಿ.ಎಸ್ ಅವರು ಅಧ್ಯಕ್ಷರು ನಂಬಿಕೆ ಇಟ್ಟು ನೇಮಿಸಿದ ಕೆಲಸವನ್ನು ಯಾವುದೇ ಚ್ಯುತಿ ಬರದಂತೆ ಮಕ್ಕಳನ್ನು ನೋಡಿಕೊಂಡು ತಮ್ಮ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.
ಲೇಖನ: ವೆಂಕಟೇಶ ಹೆಚ್, ಚಿತ್ರದುರ್ಗ (ನವ ದೆಹಲಿ). 7760023887.

